ಕರ್ನಾಟಕ

karnataka

ETV Bharat / bharat

ಅಂತ್ಯಕ್ರಿಯೆಗೆ ಕರೆದೊಯ್ಯುವಾಗ ಉಸಿರಾಡುತ್ತಿದ್ದ ಮಹಿಳೆ: ಸಂಬಂಧಿಕರ ಪ್ರಜ್ಞೆಯಿಂದ ವೈದ್ಯರ ನಿರ್ಲಕ್ಷ್ಯ ಬಯಲು - ಉತ್ತರ ಪ್ರದೇಶ

ಅಂತ್ಯಕ್ರಿಯೆಗೆಂದು ಆ್ಯಂಬುಲೆನ್ಸ್​ನಲ್ಲಿ ಕರೆದೊಯ್ಯುವಾಗ ಮಹಿಳೆ ಉಸಿರಾಡುತ್ತಿರುವುದನ್ನು ಕುಟುಂಬದ ಸದಸ್ಯರು ಗಮನಿಸಿದ್ದಾರೆ. ಹಾಗಾಗಿ, ಜೀವಂತವಾಗಿರುವಾಗಲೇ ಸತ್ತರೆಂದು ಘೋಷಿಸಿದ್ದ ಆಸ್ಪತ್ರೆಯ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.

Alive woman declared 'Dead' by Lucknow hospital
ಜೀವಂತ ಮಹಿಳೆಯನ್ನ ಸತ್ತರೆಂದು ಘೋಷಿಸಿದ ವೈದ್ಯರು

By

Published : May 3, 2021, 6:34 AM IST

Updated : May 3, 2021, 7:37 AM IST

ಲಖನೌ (ಉತ್ತರ ಪ್ರದೇಶ): ಇನ್ನೂ ಜೀವಂತವಾಗಿದ್ದ ಮಹಿಳೆಯನ್ನು ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿರುವ ಘಟನೆ ಉತ್ತರ ಪ್ರದೇಶದ ಲಖನೌನ ಡಾ.ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ನಡೆದಿದೆ.

ಘಟನೆಯ ವಿವರ

ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬರನ್ನು ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್​ ವರದಿ ನೆಗೆಟಿವ್ ​ಬಂದಿದೆ. ಉಸಿರಾಟದ ಸಮಸ್ಯೆಯಿದೆಯೆಂದು ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ ನಿನ್ನೆ ದೇಹದಲ್ಲಿ ಆಮ್ಲಜನಕದ ಮಟ್ಟ ಕಡಿಮೆ ಇದ್ದುದರಿಂದ ರೋಗಿ ಸಾವನ್ನಪ್ಪಿದ್ದಾರೆಂದು, ಮೃತದೇಹವನ್ನು ಮಹಿಳೆಯ ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು.

ಅಂತ್ಯಕ್ರಿಯೆಗೆ ಕರೆದೊಯ್ಯುವಾಗ ಉಸಿರಾಡುತ್ತಿದ್ದ ಮಹಿಳೆ

ಇದನ್ನೂ ಓದಿ: ಸತ್ತ ಮಹಿಳೆ ಅಂತ್ಯ ಸಂಸ್ಕಾರ ಮಾಡಲು ಹೋಗುವಾಗ ಮತ್ತೇ ಜೀವಂತ: ಎರಡು ಬಾರಿ ಸಾವಿಗೀಡಾದ ಮಹಿಳೆ!

ಅಂತ್ಯಕ್ರಿಯೆಗೆಂದು ಆ್ಯಂಬುಲೆನ್ಸ್​ನಲ್ಲಿ ಕರೆದೊಯ್ಯುವಾಗ ಮಹಿಳೆ ಉಸಿರಾಡುತ್ತಿದ್ದರು. ಇದನ್ನು ಕುಟುಂಬದ ಸದಸ್ಯರು ಗಮನಿಸಿದ್ದಾರೆ. ಈ ವೇೆ ಆಘಾತಗೊಂಡ ಅವರು ಮತ್ತೆ ವೈದ್ಯರ ಬಳಿ ಕರೆದೊಯ್ದಿದ್ದಾರೆ. ವೈದ್ಯರ ನಿರ್ಲಕ್ಷ್ಯ ಆರೋಪ ಹೊರಿಸಿರುವ ಕುಟುಂಬಸ್ಥರು ಆಸ್ಪತ್ರೆಯ ವಿರುದ್ಧ ಕೆಂಡಾಮಂಡಲರಾದರು.

Last Updated : May 3, 2021, 7:37 AM IST

ABOUT THE AUTHOR

...view details