ಭೋಪಾಲ್(ಮಧ್ಯಪ್ರದೇಶ): ಅಲಿರಾಜಪುರದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಬೈಕ್ ಚಲಾಯಿಸುತ್ತಿದ್ದ ಯುವಕನೊಬ್ಬ ಏಕಾಏಕಿ ರಸ್ತೆ ಬದಿ ಬಿದ್ದು ಸಾವನ್ನಪ್ಪಿರುವ ಘಟನೆ ಶನಿವಾರ ತಡರಾತ್ರಿ ನಡೆದಿದ್ದು, ಯುವಕ ಸಾವನ್ನಪ್ಪುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಿಸಿಟಿವಿ ದೃಶ್ಯಾವಳಿ ಗಮನಿಸಿದಾಗ, ವ್ಯಕ್ತಿಯೊಬ್ಬ ಬೈಕ್ನಲ್ಲಿ ಹೋಗುತ್ತಿದ್ದಾಗ ಪಕ್ಕದಲ್ಲಿ ಕಾರು ಚಾಲಕ ರಿವರ್ಸ್ ತೆಗೆದುಕೊಳ್ಳು ಮುಂದಾಗಿದ್ದಾನೆ. ಈ ವೇಳೆ, ಒಂದೆರಡು ಸೆಕೆಂಡ್ ಕಾದ ಬೈಕ್ ಚಾಲಕ, ನಂತರ ಮುಂದಕ್ಕೆ ಹೋಗಿದ್ದಾನೆ.
ಸ್ವಲ್ಪ ದೂರ ಹೋಗಿದ ನಂತರ ಬೈಕ್ ಸಮೇತ ಏಕಾಏಕಿ ರಸ್ತೆಗೆ ಬಿದ್ದಿದ್ದಾನೆ. ಕೂಡಲೇ ಸ್ಥಳದಲ್ಲಿದ್ದವರು ಯುವಕನ ಬಳಿ ಬಂದು ಎತ್ತಲು ಪ್ರಯತ್ನಿಸಿದರೂ ಕೂಡ ಆತ ಏಳದೇ ಇರುವುರಿಂದ ಅಲ್ಲಿಂದ ಹೊರಟು ಹೋಗಿದ್ದಾರೆ.