ಅಲಿಗಢ(ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಪಂಚಾಯ್ತಿ ಚುನಾವಣೆ ನಡೆಯುತ್ತಿದ್ದು, ಇಂದು ಕೂಡ ಅಲಿಗಢನ ಕೆಲವೊಂದು ಸ್ಥಾನಗಳಿಗೆ ಮತದಾನವಾಗಿದೆ. ಇದರ ಮಧ್ಯೆ ತಹಸಿಲ್ನ ಅಟ್ರಾಲಿಯಾ ಚುನಾವಣಾ ಬೂತ್ನಲ್ಲಿ ವಿಚಿತ್ರ ಘಟನೆವೊಂದು ನಡೆದಿದೆ.
ಮತ ಚಲಾವಣೆ ಮಾಡಲು ಬಂದಿದ್ದ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಹಕ್ಕು ಚಲಾವಣೆ ಮಾಡುವ ಉದ್ದೇಶದಿಂದ ಗರ್ಭಿಣಿ ಮತದಾನ ಕೇಂದ್ರಕ್ಕೆ ಆಗಮಿಸಿದ್ದರು. ಈ ವೇಳೆ ಹೆರಿಗೆ ನೋವು ಶುರುವಾಗಿದೆ. ತಕ್ಷಣವೇ ಸ್ಥಳದಲ್ಲಿದ್ದ ಕೆಲ ಮಹಿಳೆಯರು ಸುರಕ್ಷಿತವಾಗು ಹೆರಿಗೆ ಮಾಡಿಸಿಕೊಂಡಿದ್ದಾರೆ.