ಅಲಿಘರ್:ಉತ್ತರ ಪ್ರದೇಶದ ಅಲಿಘರ್ ಜಿಲ್ಲೆಯ 17 ವರ್ಷದ ಮೊಹಮ್ಮದ್ ಶಾದಾಬ್ ಎಂಬ ಯುವಕ ತನ್ನ ಸಮಾಜ ಸೇವೆಯಿಂದಾಗಿ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಹೆಸರು ದಾಖಲಿಸಿದ್ದಾನೆ. ಶಾದಾಬ್ ಪ್ರಸ್ತುತ ಯುಎಸ್ನಲ್ಲಿ ಭಾರತೀಯ ಯುವ ರಾಯಭಾರಿಯಾಗಿದ್ದಾರೆ.
ಏಷ್ಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಬರೆದ ಮೆಕ್ಯಾನಿಕ್ ಮಗ ! - ಏಷ್ಯಾ ಬುಕ್ ಆಫ್ ರೆಕಾರ್ಡ್ಸ್
ಉತ್ತರ ಪ್ರದೇಶದ ಅಲಿಘರ್ನ ಮೆಕ್ಯಾನಿಕ್ ಒಬ್ಬರ ಮಗ 17 ವರ್ಷದ ಮೊಹಮ್ಮದ್ ಶಾದಾಬ್ ತನ್ನ ಸಮಾಜ ಸೇವೆಯಿಂದ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆ ನಿರ್ಮಿಸಿದ್ದಾರೆ.
ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಉರ್ದು ಶಾಲೆಯಿಂದ ಉರ್ದು ಮಾಧ್ಯಮದಲ್ಲಿ 9 ನೇ ತರಗತಿವರೆಗೆ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಶಾದಾಬ್ ತನ್ನ 10 ನೇ ತರಗತಿಯನ್ನು ಅಮೇರಿಕನ್ ಶಾಲೆಯಲ್ಲಿ ಮುಗಿಸಿದ. ಅಲಿಘರ್ನ ಮೆಕ್ಯಾನಿಕ್ ಒಬ್ಬರ ಮಗನಾದ ಶಾದಾಬ್ ಕಳೆದ ವರ್ಷ ತಾನು ಓದಿದ ಯುಎಸ್ನ ಪ್ರೌಢಶಾಲೆಯಲ್ಲಿ ಅಗ್ರಸ್ಥಾನದಲ್ಲಿ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾಭ್ಯಾಸದ ಜೊತೆಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಇವರು ಹೆಸರು ಇದೀಗ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿದೆ. ಈ ಕುರಿತು ಸಂತಸ ಹಂಚಿಕೊಂಡ ಶಾದಾಬ್ "ಈ ಗೌರವಕ್ಕಾಗಿ ನಾನು ದೇವರಿಗೆ ಕೃತಜ್ಞನಾಗಿದ್ದೇನೆ. ನನ್ನನ್ನು ಬೆಂಬಲಿಸಿದ್ದಕ್ಕಾಗಿ ನನ್ನ ಹೆತ್ತವರಿಗೂ ನಾನು ಕೃತಜ್ಞನಾಗಿದ್ದೇನೆ" ಎಂದು ಹೇಳಿದ್ರು.