ಕರ್ನಾಟಕ

karnataka

ETV Bharat / bharat

ರಣತಂಬೂರ್ ಪಾರ್ಕ್​ನಲ್ಲಿ ಹುಲಿ ಕೊರಳಿಗೆ ವೈರ್​: ಬೇಟೆಗಾರರ ವಿರುದ್ಧ ರೆಡ್ ಅಲರ್ಟ್​ - ರಾಜಸ್ಥಾನದಲ್ಲಿ ಬೇಟೆಗಾರರ ವಿರುದ್ಧ ರೆಡ್ ಅಲರ್ಟ್​

ರಣತಂಬೂರ್ ನ್ಯಾಷನಲ್ ಪಾರ್ಕ್ ಹುಲಿಯೊಂದರ ಕೊರಳಿಗೆ ವೈರ್ ಸುತ್ತಿಕೊಂಡಿರುವುದು ಪತ್ತೆಯಾಗುತ್ತಿದ್ದಂತೆ ಬೇಟೆಗಾರರ ವಿರುದ್ಧ ರೆಡ್​ ಅಲರ್ಟ್ ಘೋಷಣೆ ಮಾಡಲಾಗಿದೆ.

noose around tigers neck
ರಣತಂಬೂರ್ ನ್ಯಾಷನಲ್ ಪಾರ್ಕ್​ನಲ್ಲಿ ಹುಲಿ ಕೊರಳಿಗೆ ವೈರ್​

By

Published : Dec 6, 2020, 8:52 PM IST

ಸವಾಯ್ ಮಾಧೋಪುರ್ (ರಾಜಸ್ಥಾನ):ಹುಲಿಯೊಂದರ ಕೊರಳಿಗೆ ವೈರ್ ಸುತ್ತಿಕೊಂಡಿರುವುದು ಕ್ಯಾಮರಾದಲ್ಲಿ ಸೆರೆಯಾಗುತ್ತಿದ್ದಂತೆ ರಾಜಸ್ಥಾನದ ರಣತಂಬೂರ್ ನ್ಯಾಷನಲ್ ಪಾರ್ಕ್​ನ ಅರಣ್ಯಾಧಿಕಾರಿಗೆ ನೋಟಿಸ್ ನೀಡಲಾಗಿದ್ದು, ಬೇಟೆಗಾರರ ವಿರುದ್ಧ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಟಿ-108 ಹೆಸರಿನ ಹುಲಿಯ ಕೊರಳಿಗೆ ತಂತಿ ಸುತ್ತಿಕೊಂಡಿದ್ದು, ಇದು ತಿಳಿದು ಬಂದ ನಂತರ ಎಲ್ಲಾ ಅರಣ್ಯ ಸಿಬ್ಬಂದಿ ಹುಲಿಯನ್ನು ಹುಡುಕುವ ಸಲುವಾಗಿ ತಮ್ಮ ಎಲ್ಲಾ ರಜೆಗಳನ್ನು ರದ್ದು ಮಾಡಿ, ಕಾರ್ಯಾಚರಣೆ ಆರಂಭಿಸಿದ್ದರು.

ಹುಲಿಯನ್ನು ಪತ್ತೆ ಹಚ್ಚಿ ಅದರ ಕುತ್ತಿಗೆಯಲ್ಲಿದ್ದ ವೈರ್​ ಅನ್ನು ಸುರಕ್ಷಾ ಕ್ರಮಗಳನ್ನು ಅನುಸರಿಸಿ ತೆಗೆಯಲಾಗಿದ್ದು, ಹುಲಿಯ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓದಿ :ಬಂಡೀಪುರದ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿರತೆ ಸಾವು

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾದ ಶೃತಿ ಶರ್ಮಾ ಪ್ರಾದೇಶಿಕ ಅರಣ್ಯಾಧಿಕಾರಿಯಾದ ಅನಿಲ್ ಕುಮಾರ್​ಗೆ ನೋಟಿಸ್ ನೀಡಿದ್ದು ಅವರ ವಿರುದ್ಧ ಅವೇಟಿಂಗ್ ಪೋಸ್ಟಿಂಗ್ ಆರ್ಡರ್​ (ಎಪಿಒ ) ಅನ್ನು ಹೊರಡಿಸಲಾಗಿದೆ.

ಇದಾದ ನಂತರ ರಣತಂಬೂರ್ ನ್ಯಾಷನಲ್ ಪಾರ್ಕ್ ಸುತ್ತಲೂ ನಿಗಾ ವಹಿಸಲಾಗಿದ್ದು, ಬೇಟೆಗಾರರ ವಿರುದ್ಧ ರೆಡ್ ಅಲರ್ಟ್​ ಘೋಷಣೆ ಮಾಡಲಾಗಿದೆ. ಎಲ್ಲಾ ಪ್ರದೇಶಗಳಲ್ಲಿ ಅಧಿಕಾರಿಗಳನ್ನು ಗಸ್ತು ತಿರುಗಲು ಸೂಚನೆ ನೀಡಲಾಗಿದೆ. ಈ ಸದ್ಯಕ್ಕೆ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.

2018ರಲ್ಲಿ ರಣತಂಬೂರ್ ನ್ಯಾಷನಲ್ ಪಾರ್ಕ್​ನಲ್ಲಿ ಎರಡು ಹುಲಿಗಳು ಸಾವನ್ನಪ್ಪಿ, ವಿಷಾಹಾರ ಸೇವನೆಯಿಂದ ಮೃತಪಟ್ಟಿವೆ ಎಂದು ವರದಿಯಾಗಿತ್ತು. ಈಗ ಹುಲಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಅವುಗಳ ಸಂರಕ್ಷಣೆಗಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.

ABOUT THE AUTHOR

...view details