ಕರ್ನಾಟಕ

karnataka

ETV Bharat / bharat

ಪಾಕ್​ನಿಂದ ಭಾರತಕ್ಕೆ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಯತ್ನ: ಗಡಿಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಜಪ್ತಿ - ಗಡಿಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳ ಜಪ್ತಿ

ಪಾಕ್​ನಿಂದ ಭಾರತಕ್ಕೆ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಬಗ್ಗೆ ಗುಪ್ತಚರ ಮಾಹಿತಿ ಮೇರೆಗೆ ಬಿಎಸ್​ಎಫ್ ಯೋಧರು ಈ ಕಾರ್ಯಾಚರಣೆ ನಡೆಸಿದ್ದಾರೆ. ಬೆಳಗ್ಗೆ ಅಂತಾರಾಷ್ಟ್ರೀಯ ಗಡಿಯಲ್ಲಿ ಗಸ್ತು ತಿರುಗಿ ಒಂದು ಬ್ಯಾಗ್​ ಪತ್ತೆ ಹೆಚ್ಚಿದ್ದಾರೆ.

BSF special search operation in Jammu and Kashmir
BSF special search operation in Jammu and Kashmir

By

Published : Apr 7, 2022, 12:47 PM IST

ಶ್ರೀನಗರ (ಜಮ್ಮು-ಕಾಶ್ಮೀರ): ಜಮ್ಮು-ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯ ಅಖ್ನೂರ್​ನಲ್ಲಿ ಬಿಎಸ್​ಎಫ್​ ಯೋಧರು ಗುರುವಾರ ವಿಶೇಷ ಶೋಧ ಕಾರ್ಯಾಚರಣೆ ನಡೆಸಿ, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಒಂದು ಎಕೆ-47 ರೈಫಲ್​ ಮತ್ತು ಮೇಡ್ ಇನ್ ಇಟಲಿಯ ಎರಡು ಪಿಸ್ತೂಲ್​ಗಳು ಸೇರಿ ಇತರ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.

ಪಾಕಿಸ್ತಾನದಿಂದ ಭಾರತಕ್ಕೆ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಬಗ್ಗೆ ಗುಪ್ತಚರ ಮಾಹಿತಿ ಮೇರೆಗೆ ಬಿಎಸ್​ಎಫ್ ಯೋಧರು ಈ ಕಾರ್ಯಾಚರಣೆ ನಡೆಸಿದ್ದಾರೆ. ಬೆಳಗ್ಗೆ ಅಂತಾರಾಷ್ಟ್ರೀಯ ಗಡಿಯಲ್ಲಿ ಗಸ್ತು ತಿರುಗಿ ಒಂದು ಬ್ಯಾಗ್​ ಪತ್ತೆ ಹೆಚ್ಚಿದ್ದಾರೆ. ಅಕ್ರಮವಾಗಿ ಭಾರತಕ್ಕೆ ಸಾಗಿಸಲು ಬ್ಯಾಗ್​ನಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗಿತ್ತು ಎನ್ನಲಾಗ್ತಿದೆ.

ವಶಕ್ಕೆ ಪಡೆದ ಬ್ಯಾಗ್​ನಲ್ಲಿ ಒಂದು ಎಕೆ-47 ರೈಫಲ್​, ಇಟಲಿಯ ಎರಡು ಪಿಸ್ತೂಲ್​ಗಳು, ನಾಲ್ಕು ಮ್ಯಾಗಜೀನ್​ಗಳು ಹಾಗೂ ಎಕೆ-47 ರೈಫಲ್​ನ 20 ಬುಲೆಟ್​ಗಳು ಹಾಗೂ ಪಿಸ್ತೂಲ್​ಗಳ 40 ಬುಲೆಟ್​ಗಳು ದೊರೆತಿವೆ. ಗಡಿಗೆ ಹೊಂದಿಕೊಂಡಿರುವ ಪರ್ಗ್ವಾಲ್​ ಉಪ ವಲಯದಲ್ಲಿ ಬ್ಯಾಗ್​ ಪತ್ತೆಯಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಸಿಎನ್​ಜಿ ದರದಲ್ಲಿ ಮತ್ತೆ 2.50 ರೂ. ಏರಿಕೆ.. 6 ದಿನದಲ್ಲಿ ಪ್ರತಿ ಕೆಜಿಗೆ 9.10 ರೂ. ಹೆಚ್ಚಳ!

ABOUT THE AUTHOR

...view details