ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿರುವ ಗವರ್ನರ್ ಜಗದೀಪ್ ಧಂಕರ್, ರಾಜ್ಯದಲ್ಲಿ ಅಲ್-ಖೈದಾ ಭಯೋತ್ಪಾದನೆ ಹೆಚ್ಚಾಗ್ತಿದೆ ಎಂದಿದ್ದಾರೆ.
ಪ.ಬಂಗಾಳದಲ್ಲಿ ಅಲ್ - ಖೈದಾ ಹೆಚ್ಚಾಗ್ತಿದೆ ಎಂದ ಗವರ್ನರ್: ಮಮತಾ ವಿರುದ್ಧ ವಾಗ್ದಾಳಿ! - ಪಶ್ಚಿಮ ಬಂಗಾಳ ಇತ್ತೀಚಿನ ಸುದ್ದಿ
ರಾಜ್ಯದಲ್ಲಿ ಅಲ್-ಖೈದಾ ಭಯೋತ್ಪಾದನೆ ಹೆಚ್ಚಾಗ್ತಿದ್ರೂ ಮಮತಾ ಬ್ಯಾನರ್ಜಿ ಯಾವ ಕ್ರಮ ಕೈಗೊಂಡಿದ್ದಾರೆ ಎಂದು ಅಲ್ಲಿನ ಗವರ್ನರ್ ಪ್ರಶ್ನೆ ಮಾಡಿದ್ದಾರೆ.
ಇದರಿಂದ ರಾಜ್ಯದ ಭದ್ರತಾ ವಾತಾವರಣಕ್ಕೆ ಅಪಾಯವಿದೆ ಎಂದು ಹೇಳಿರುವ ಗವರ್ನರ್, ಅಲ್ ಖೈದಾ ಪಶ್ಚಿಮ ಬಂಗಾಳದಲ್ಲಿ ತನ್ನ ರೆಕ್ಕೆ ಹರಡುತ್ತಿದ್ದು, ಅಕ್ರಮವಾಗಿ ಬಾಂಬ್ ತಯಾರಿಕೆಯಲ್ಲಿ ತೊಡಗಿದೆ ಎಂದು ಆರೋಪಿಸಿದೆ.ಪಶ್ಚಿಮ ಬಂಗಾಳದ ಕಾನೂನು ಸುವ್ಯವಸ್ಥೆ ಅಪಾಯದಲ್ಲಿದೆ. ರಾಜಕೀಯ ನಾಯಕರ ಹತ್ಯೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಏನು ಮಾಡುತ್ತಿದ್ದಾರೆಂದು ತಿಳಿಯಲು ನಾನು ಬಯಸುತ್ತೇನೆ ಎಂದಿರುವ ಅವರು, ಪಶ್ಚಿಮ ಬಂಗಾಳದಲ್ಲಿ ಡಿಜಿಪಿ ಕೆಲಸ ರಹಸ್ಯವಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕಳೆದ ಕೆಲ ದಿನಗಳ ಹಿಂದೆ ಬೃಹತ ಕಾರ್ಯಾಚರಣೆ ನಡೆಸಿದ್ದ ಎನ್ಐಎ ಕೆಲ ಅಲ್ಖೈದಾ ಉಗ್ರರ ಬಂಧನ ಮಾಡುವಲ್ಲಿ ಯಶಸ್ವಿಯಾಗಿತ್ತು.