ರಾಂಬಾನ್(ಜಮ್ಮು-ಕಾಶ್ಮೀರ):ಭಯೋತ್ಪಾದನಾ ಸಂಘಟನೆಯಾದ ಅಲ್ಖೈದಾ ಬೆಂಬಲಿತ ಎಕ್ಯೂಐಎಸ್ ಸಂಘಟನೆಗೆ ಸೇರಿದ ಉಗ್ರನನ್ನು ಪಶ್ಚಿಮ ಬಂಗಾಳದಲ್ಲಿ ಸೆರೆಹಿಡಿದ ಬೆನ್ನಲ್ಲೇ ಮತ್ತೊಬ್ಬ ಅಲ್ಖೈದಾ ಭಯೋತ್ಪಾದಕನನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ ಬಂಧಿಸಲಾಗಿದೆ.
ಪಶ್ಚಿಮ ಬಂಗಾಳದ ಬಳಿಕ ಜಮ್ಮು ಕಾಶ್ಮೀರದಲ್ಲಿ ಅಲ್ಖೈದಾ ಉಗ್ರನ ಸೆರೆ
ಪಶ್ಚಿಮ ಬಂಗಾಳದಲ್ಲಿ ಒಬ್ಬ ಅಲ್ಖೈದಾ ಉಗ್ರನ ಬಂಧನದ ಬಳಿಕ, ಇಂದು ಜಮ್ಮು- ಕಾಶ್ಮೀರದಲ್ಲಿ ಮತ್ತೊಬ್ಬ ಭಯೋತ್ಪಾದಕನ ಸೆರೆ ಹಿಡಿಯಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ಅಲ್ಖೈದಾ ಉಗ್ರನ ಸೆರೆ
ಶಂಕಿತ ಉಗ್ರನನ್ನು ಅಮೀರುದ್ದೀನ್ ಖಾನ್ ಎಂದು ಗುರುತಿಸಲಾಗಿದೆ. ಈತ ಪಶ್ಚಿಮ ಬಂಗಾಳದ ಮೂಲದವನಾಗಿದ್ದಾನೆ. ಜಮ್ಮು ಕಾಶ್ಮೀರದ ರಾಂಬಾನ್ನಲ್ಲಿ ಅಡಗಿದ್ದ ಈತನ ಮೇಲೆ ದಾಳಿ ಮಾಡಿದ ಭದ್ರತಾ ಪಡೆಗಳು ಚೀನಾ ಗ್ರೆನೇಡ್ ಜೊತೆಗೆ ಜೀವಂತವಾಗಿ ಸೆರೆ ಹಿಡಿಯಲಾಗಿದೆ. ಟೆರರಿಸ್ಟ್ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.