ಲಲಿತ್ಪುರ(ಉತ್ತರ ಪ್ರದೇಶ): ನಾಲ್ವರು ಕಾಮುಕರಿಂದ ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆಯೊಬ್ಬಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲು ಹೋಗಿದ್ದು, ಈ ವೇಳೆ ಠಾಣೆಯ ಸ್ಟೇಷನ್ ಹೌಸ್ ಆಫೀಸರ್(SHO) ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಉತ್ತರ ಪ್ರದೇಶದ ಲಲಿತ್ಪುರದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಏನಿದು ಪ್ರಕರಣ?: ಲಲಿತ್ಪುರದ ಪಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತೆಯನ್ನ ಕಳೆದ ಏಪ್ರಿಲ್ 22ರಂದು ನಾಲ್ವರು ದುಷ್ಕರ್ಮಿಗಳು ಭೋಪಾಲ್ಗೆ ಕರೆದೊಯ್ದಿದ್ದಾರೆ. ಸತತ ಮೂರು ದಿನಗಳ ಕಾಲ ಬಾಲಕಿ ಮೇಲೆ ದುಷ್ಕೃತ್ಯ ನಡೆಸಲಾಗಿದೆ. ಇದಾದ ಬಳಿಕ ಪೊಲೀಸ್ ಠಾಣೆಯಲ್ಲಿ ಬಾಲಕಿಯನ್ನ ಬಿಟ್ಟು ಪರಾರಿಯಾಗಿದ್ದಾರೆ. ಅಲ್ಲಿ ಎಸ್ಹೆಚ್ಒ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ತಿಳಿದು ಬಂದಿದೆ.
ಇದಾದ ಬಳಿಕ ಬಾಲಕಿಯನ್ನ ಎರಡು ದಿನಗಳ ಕಾಲ ಯಾರಿಗೂ ಗೊತ್ತಾಗದ ರೀತಿಯಲ್ಲಿ ಇಟ್ಟುಕೊಂಡಿರುವ ಪೊಲೀಸ್ ಅಧಿಕಾರಿ ಅವಳ ಮೇಲೆ ಪೊಲೀಸ್ ಠಾಣೆಯ ರೂಮ್ನಲ್ಲೇ ಅತ್ಯಾಚಾರವೆಸಗಿದ್ದಾಗಿ ತಿಳಿದು ಬಂದಿದೆ. ಇದರ ಬಗ್ಗೆ ಕುಟುಂಬಸ್ಥರಿಗೆ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ:RBI ರೆಪೊ ದರ ಏರಿಕೆ: ಗೃಹ ಸಾಲ, ಕಾರುಗಳ EMI ಹೊರೆ ಹೆಚ್ಚಳ.. ಎಫ್ಡಿ ಹೂಡಿಕೆದಾರರಿಗೆ ಅಚ್ಛೇ ದಿನ್!