ಲಖನೌ(ಉತ್ತರ ಪ್ರದೇಶ): ಗೃಹಬಳಕೆಯ ಅಡುಗೆ ಅನಿಲ ಬೆಲೆ ಏರಿಕೆ ಕುರಿತು ಮಂಗಳವಾರ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಐದು ರಾಜ್ಯಗಳ ಚುನಾವಣೆಯ ನಂತರ ಸರ್ಕಾರ ಹಣದುಬ್ಬರದ ಮೂಲಕ ಮತ್ತೊಂದು ಉಡುಗೊರೆ ನೀಡಿದೆ ಎಂದು ವ್ಯಂಗ್ಯವಾಡಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 80 ಪೈಸೆ ಹೆಚ್ಚಿಸಲಾಗಿದೆ. ಗೃಹಬಳಕೆ ಅಡುಗೆ ಅನಿಲದ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 50 ರೂಪಾಯಿಯನ್ನು ಹೆಚ್ಚಿಸಲಾಗಿದ್ದು, ಈ ವಿಚಾರವಾಗಿ ಅಖಿಲೇಶ್ ಯಾದವ್ ಕಿಡಿಕಾರಿದ್ದಾರೆ.
ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅಖಿಲೇಶ್ ಯಾದವ್, ಸಾರ್ವಜನಿಕರಿಗೆ ಬಿಜೆಪಿ ಸರ್ಕಾರ ಹಣದುಬ್ಬರ ಮೂಲಕ ಮತ್ತೊಂದು ಉಡುಗೊರೆ ನೀಡಿದೆ. ಲಖನೌನಲ್ಲಿ ಎಲ್‌ಪಿಜಿ ಸಿಲಿಂಡರ್ 1,000 ರೂಪಾಯಿ ಸಮೀಪದಲ್ಲಿದ್ದು, ಪಾಟ್ನಾದಲ್ಲಿ 1,000 ರೂಪಾಯಿಗಿಂತ ಹೆಚ್ಚಿದೆ. ಚುನಾವಣೆ ಮುಗಿದಿದೆ, ಹಣದುಬ್ಬರ ಶುರುವಾಗಿದೆ ಎಂದು ಕಿಡಿಕಾರಿದ್ದಾರೆ.
ಎಲ್‌ಪಿಜಿ ದರಗಳನ್ನು ಕೊನೆಯ ಬಾರಿಗೆ ಅಕ್ಟೋಬರ್ 6, 2021ರಂದು ಪರಿಷ್ಕರಿಸಲಾಗಿತ್ತು. ಉತ್ತರ ಪ್ರದೇಶ ಮತ್ತು ಪಂಜಾಬ್ ಸೇರಿದಂತೆ ಐದು ರಾಜ್ಯಗಳು ಚುನಾವಣೆ ಹಿನ್ನೆಲೆಯಲ್ಲಿ ನವೆಂಬರ್ 4ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಯಾವುದೇ ಏರಿಕೆ ಮಾಡಿರಲಿಲ್ಲ.
ಇದನ್ನೂ ಓದಿ:ರಾಜಕೀಯ ಪ್ರತೀಕಾರದ ಹಿಂಸಾಚಾರ : 12 ಮಂದಿ ಸಾವು, 5 ಮನೆಗಳಿಗೆ ಬೆಂಕಿ