ಲಖನೌ (ಉತ್ತರ ಪ್ರದೇಶ):ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಹಿಂದಿನ ಸರ್ಕಾರವು ಪ್ರಾರಂಭಿಸಿದ ಪರಿಸರ ಸಂಬಂಧಿತ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಪರಿಣಾಮ ಇಂದು ರಾಜ್ಯದ ಹಲವಾರು ನಗರಗಳಲ್ಲಿ ಮಾಲಿನ್ಯ ಹೆಚ್ಚಳವಾಗಿದೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಸ್ವಿಸ್ ತಂತ್ರಜ್ಞಾನ ಕಂಪನಿಯ 2020ರ ವಿಶ್ವ ವಾಯು ಗುಣಮಟ್ಟ ವರದಿ ಉಲ್ಲೇಖಿಸಿದ ಯಾದವ್, ವಿಶ್ವದ ಅತ್ಯಂತ ಕಲುಷಿತ 30 ನಗರಗಳಲ್ಲಿ 10 ನಗರಗಳು ಉತ್ತರ ಪ್ರದೇಶದ್ದಾಗಿವೆ. 30ರಲ್ಲಿ ರಾಜಧಾನಿ ಲಖನೌ 9ನೇ ಸ್ಥಾನದಲ್ಲಿದೆ. ಸಮಾಜವಾದಿ ಸರ್ಕಾರದ ಸಾರ್ವಜನಿಕ ಸಾರಿಗೆ, ಮೆಟ್ರೋ, ಸೈಕಲ್ ಟ್ರ್ಯಾಕ್, ಗೋಮತಿ ನದಿ, ಪಾರ್ಕ್ ಸಂಬಂಧಿತ ಪರಿಸರ ಕಾರ್ಯಗಳನ್ನು ನಿಲ್ಲಿಸದೇ ಇದ್ದಿದ್ದರೆ ಬಿಜೆಪಿ ಸರ್ಕಾರವು ಈ ದಿನವನ್ನ ನೋಡುತ್ತಿರಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.