ಕರ್ನಾಟಕ

karnataka

ETV Bharat / bharat

ಕೇಂದ್ರದ ಬಿಜೆಪಿ ಸರ್ಕಾರ ತನ್ನ ಹೆಲಿಕಾಪ್ಟರ್ ತಡೆದಿದೆ: ಅಖಿಲೇಶ್ ಯಾದವ್ ಆರೋಪ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೆಹಲಿಯಲ್ಲಿ ತನ್ನ ಹೆಲಿಕಾಪ್ಟರ್ ಅನ್ನು ತಡೆದಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದು, ಚುನಾವಣಾ ಆಯೋಗ ಈ ಕುರಿತು ಗಮನ ಹರಿಸಬೇಕೆಂದು ಮನವಿ ಮಾಡಿದ್ದಾರೆ.

Akhilesh Yadav alleges BJP's hand in chopper delay, demands Election Commission to take cognizance
ಚುನಾವಣೆಗೆ ಮೊದಲು ಬಿಜೆಪಿ ಏನು ಬೇಕಾದರೂ ಮಾಡುತ್ತದೆ: ಅಖಿಲೇಶ್ ಕಿಡಿ

By

Published : Jan 29, 2022, 11:27 AM IST

ನವದೆಹಲಿ: ಉತ್ತರಪ್ರದೇಶದ ಚುನಾವಣಾ ಕಣ ರಂಗೇರುತ್ತಿದೆ. ಮತಗಳನ್ನು ಪಡೆಯಲು ಒಂದು ಪಕ್ಷದ ಮೇಲೆ ಮತ್ತೊಂದು ಪಕ್ಷವು ಟೀಕಾ ಪ್ರಹಾರಗಳನ್ನು ನಡೆಸುವುದು ಎಂದಿನಂತೆ ಸಾಮಾನ್ಯವಾಗಿದೆ. ಈಗ ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಅಖಿಲೇಶ್ ಯಾದವ್ ಹೊಸ ಆರೋಪ ಮಾಡಿದ್ದಾರೆ.

ಹೌದು, ಮುಜಾಫರ್​​ನಗರಕ್ಕೆ ಸುದ್ದಿಗೋಷ್ಠಿಯೊಂದಕ್ಕೆ ತೆರಳಬೇಕಾಗಿದ್ದ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೆಹಲಿಯಲ್ಲಿ ತನ್ನ ಹೆಲಿಕಾಪ್ಟರ್ ತಡೆದಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಇದರ ಜೊತೆಗೆ 'ಚುನಾವಣೆಗೆ ಮೊದಲು ಬಿಜೆಪಿ ಏನು ಬೇಕಾದರೂ ಮಾಡುತ್ತದೆ' ಎಂದು ಅಖಿಲೇಶ್ ಆರೋಪಿಸಿದ್ದಾರೆ.

ಚುನಾವಣಾ ಆಯೋಗ ಈ ಕುರಿತು ಗಮನ ಹರಿಸಬೇಕು. ಯಾರಾದರೂ ಸುದ್ದಿಗೋಷ್ಠಿಗೆ ತೆರಳುವಾಗ ಆತನ್ನು ಎರಡು ಗಂಟೆಗಳ ಕಾಲ ತಡೆದರೆ, ಆತ ಹೇಗೆ ಸಮಯಕ್ಕೆ ಸರಿಯಾಗಿ ಸುದ್ದಿಗೋಷ್ಠಿ ತಲುಪಲು ಸಾಧ್ಯವಾಗುತ್ತದೆ.? ಎಂದು ಅಖಿಲೇಶ್ ಪ್ರಶ್ನಿಸಿದ್ದಾರೆ.

ಈಗಿರುವ ಮಾಹಿತಿಯಂತೆ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಮುಜಫರ್‌ನಗರದಲ್ಲಿ ಅಖಿಲೇಶ್ ಯಾದವ್ ಅವರ ಸುದ್ದಿಗೋಷ್ಠಿಯನ್ನು ನಿಗದಿ ಮಾಡಲಾಗಿತ್ತು. ಆದರೆ ದೆಹಲಿಯಲ್ಲಿದ್ದ ಅವರ ಹೆಲಿಕಾಪ್ಟರ್​ಗೆ 2.30ರವರೆಗೆ ಏರ್ ಟ್ರಾಫಿಕ್ ಅಧಿಕಾರಿಗಳು ಅನುಮತಿ ನೀಡಿರಲಿಲ್ಲ. ಇದರಿಂದ ಎರಡು ಗಂಟೆಗಳ ನಂತರ ಅವರು ಹೊರಡಬೇಕಾಯಿತು ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಮಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತೆ ಕುರಿತು ಉನ್ನತ ಮಟ್ಟದ ಸಭೆ

For All Latest Updates

ABOUT THE AUTHOR

...view details