ಕರ್ನಾಟಕ

karnataka

ETV Bharat / bharat

ನೇಣು ಬಿಗಿದ ಸ್ಥಿತಿಯಲ್ಲಿ ಮಹಾಂತ ನರೇಂದ್ರ ಗಿರಿ ಮೃತದೇಹ ಪತ್ತೆ.. ಸ್ಥಳದಲ್ಲಿ ಸೊಸೈಡ್​ ನೋಟ್​ ಲಭ್ಯ.. - Narendra Giri

ಮಹಾಂತ್​ ನರೇಂದ್ರ ಗಿರಿ ಸಾವಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​​ ಸಂತಾಪ ಸೂಚಿಸಿದ್ದು, ಅವರ ಸಾವು ಆಧ್ಯಾತ್ಮಿಕ ಲೋಕಕ್ಕೆ ತುಂಬಲಾರದ ನಷ್ಟ ಎಂದು ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಮಾಜಿ ಸಿಎಂ, ಸಮಾಜವಾದಿ ಪಕ್ಷದ ಅಖಿಲೇಶ್​ ಯಾದವ್​ ಕೂಡ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ..

Mahant Narendra Giri
Mahant Narendra Giri

By

Published : Sep 20, 2021, 8:19 PM IST

ಪ್ರಯಾಗ್​ರಾಜ್​(ಉತ್ತರಪ್ರದೇಶ) :ಅಖಾರ ಪರಿಷತ್ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳದಲ್ಲಿ ಸೂಸೈಡ್​ ನೋಟ್​ ಲಭ್ಯವಾಗಿದೆ.

ಉತ್ತರಪ್ರದೇಶದ ಪ್ರಯಾಗ್​ರಾಜ್​​ನ ಬಘಂಬ್ರಿ ಗಡ್ಡಿ ಮಠದಲ್ಲಿನ ಅವರ ಕೋಣೆಯಲ್ಲಿ ನರೇಂದ್ರ ಗಿರಿ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ಘಟನೆ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು, ಅವರ ಕೋಣೆಯ ಬಾಗಿಲು ಮುರಿದು ಒಳಗಡೆ ಹೋಗಿದ್ದಾರೆ. ಈ ವೇಳೆ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ.

ಸ್ಥಳದಲ್ಲಿ ಸೊಸೈಡ್ ನೋಟ್ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಲಭ್ಯವಾಗಿರುವ ಸೊಸೈಡ್​ ನೋಟ್ ಪ್ರಕಾರ ಅವರು ಮಾನಸಿಕ ತೊಂದರೆಗೊಳಗಾಗಿದ್ದರು ಎಂದು ತಿಳಿಸಿದ್ದಾರೆ.

72 ವರ್ಷದ ಮಹಾಂತ್​ ನರೇಂದ್ರ ಗಿರಿ ಕಳೆದ ಏಪ್ರಿಲ್​ ತಿಂಗಳಲ್ಲಿ ಕೋವಿಡ್ ಸೋಂಕಿಗೊಳಗಾಗಿದ್ದರು. ಈ ವೇಳೆ ತಮ್ಮಷ್ಟಕ್ಕೆ ತಾವೇ ಐಸೋಲೇಷನ್​ಗೊಳಗಾಗಿದ್ದರು. ಇದಾದ ಬಳಿಕ ಅನೇಕ ವಿಷಯಗಳಿಂದ ಮಾನಸಿಕವಾಗಿ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.

ಮಹಾಂತ್​ ನರೇಂದ್ರ ಗಿರಿ ಸಾವಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​​ ಸಂತಾಪ ಸೂಚಿಸಿದ್ದು, ಅವರ ಸಾವು ಆಧ್ಯಾತ್ಮಿಕ ಲೋಕಕ್ಕೆ ತುಂಬಲಾರದ ನಷ್ಟ ಎಂದು ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಮಾಜಿ ಸಿಎಂ, ಸಮಾಜವಾದಿ ಪಕ್ಷದ ಅಖಿಲೇಶ್​ ಯಾದವ್​ ಕೂಡ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.

ಈ ಕಾರಣಕ್ಕಾಗಿ ಆತ್ಮಹತ್ಯೆ? :ಕಳೆದ ಕೆಲ ತಿಂಗಳಿಂದ ನರೇಂದ್ರ ಗಿರಿ ಹಾಗೂ ಅವರ ಶಿಷ್ಯ ಆನಂದ ಗಿರಿ ಅವರ ನಡುವೆ ಮನಸ್ತಾಪವಿತ್ತು. ದೇವಾಲಯದ ಹಣ ದುರುಪಯೋಗ ಮಾಡಿಕೊಂಡಿದ್ದಾರೆಂಬ ಕಾರಣಕ್ಕಾಗಿ ಆನಂದ ಗಿರಿ ವಿರುದ್ಧ ಕ್ರಮಕೈಗೊಳ್ಳಲಾಗಿತ್ತು.

ಇದಾದ ಬಳಿಕ ಅವರನ್ನ ಮಠದಿಂದ ಹೊರ ಹಾಕಲಾಗಿತ್ತು. ಹೀಗಾಗಿ, ನರೇಂದ್ರ ಗಿರಿ ವಿರುದ್ಧ ಅವರು ಅನೇಕ ರೀತಿಯ ಹೇಳಿಕೆ ನೀಡಿ, ಗಂಭೀರ ಆರೋಪ ಮಾಡಿದ್ದರು. ಇದರಿಂದ ಅವರು ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.

ABOUT THE AUTHOR

...view details