ಕರ್ನಾಟಕ

karnataka

ETV Bharat / bharat

ಪ್ರಾಣಿ ಪ್ರಿಯರಿಗೆ ಗುಡ್​ ನ್ಯೂಸ್​: ಸಾಕುಪ್ರಾಣಿಗಳೊಂದಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಿದ ಆಕಾಶ್​ ಏರ್​​

ನವೆಂಬರ್‌ 1ರಿಂದ ಪ್ರಯಾಣಿಕರಿಗೆ ವಿಮಾನದಲ್ಲಿ ತಮ್ಮ ಸಾಕು ನಾಯಿಗಳು ಮತ್ತು ಬೆಕ್ಕುಗಳನ್ನು ಜತೆಗೆ ಕರೆದೊಯ್ಯಲು ಅವಕಾಶ ಕಲ್ಪಿಸಲಾಗುವುದು ಎಂದು ಆಕಾಶ್​ ಏರ್‌ ಗುರುವಾರ ಹೇಳಿದೆ.

ಆಕಾಶ್​ ಏರ್​​
ಆಕಾಶ್​ ಏರ್​​

By

Published : Oct 6, 2022, 6:30 PM IST

ನವದೆಹಲಿ: ಏರ್ ಇಂಡಿಯಾ ನಂತರ, ಆಕಾಶ ಏರ್ ನವೆಂಬರ್ 1 ರಿಂದ ವಿಮಾನದಲ್ಲಿ ಸಾಕು ಪ್ರಾಣಿಗಳನ್ನು ಕರೆದೊಯ್ಯಲು ಅನುಮತಿಸುವುದಾಗಿ ಗುರುವಾರ ಘೋಷಿಸಿದೆ. ನೂತನ ಆಕಾಶ ಏರ್ ವಿಮಾನಯಾನ ಸಂಸ್ಥೆಯ ಬುಕ್ಕಿಂಗ್ ಅಕ್ಟೋಬರ್ 15ರಿಂದ ಆರಂಭವಾಗುತ್ತಿದೆ.

ಪ್ರಾಣಿ ಪ್ರಿಯರು ತಮ್ಮ ಸಾಕುಪ್ರಾಣಿಗಳೊಂದಿಗೆ ನವೆಂಬರ್ 1ರಿಂದ, ತಮ್ಮ ಕ್ಯಾಬಿನ್‌ನಲ್ಲಿ ಪ್ರಯಾಣಿಸಬಹುದು. ಕ್ಯಾಬಿನ್‌ನಲ್ಲಿ 7 ಕೆಜಿ ತೂಕದ ಸಾಕುಪ್ರಾಣಿಗಳನ್ನು ಮಾತ್ರ ಅನುಮತಿಸಲಾಗುವುದು. ಇದಕ್ಕಿಂತ ಹೆಚ್ಚಿನವಕ್ಕೆ ಕಾರ್ಗೋದಲ್ಲಿ ಅನುಮತಿಸಬಹುದು ಎಂದು ಆಕಾಶ ಏರ್ ಹೇಳಿದೆ.

ಸಾಕುಪ್ರಾಣಿಗಳಿಗೆ ಅನುಮತಿ ಲಭ್ಯವಿರುವ ಮೊದಲ ಆಕಾಶ ಏರ್ ಫ್ಲೈಟ್ ನವೆಂಬರ್ 1 ರಂದು ಟೇಕ್ ಆಫ್ ಆಗಲಿದೆ. 7 ಕೆಜಿ (ಒಂದು ಸಾಕುಪ್ರಾಣಿ) ವರೆಗಿನ ಸಾಕುಪ್ರಾಣಿಗಳನ್ನು ಕ್ಯಾಬಿನೊಳಗೆ ಅನುಮತಿ ನೀಡಲಾಗಿದೆ. ಉಳಿದವುಗಳನ್ನು ಕಾರ್ಗೋದಲ್ಲಿ ಅನುಮತಿಸಬಹುದು ಎಂದು ಆಕಾಶ ಏರ್ ಹೇಳಿದೆ.

ಇದನ್ನೂ ಓದಿ:ಕೆಂಪೇಗೌಡ ಏರ್​ಪೋರ್ಟ್​​ಗೆ ಆಕಾಶ್ ಏರ್​ಲೈನ್ಸ್​ನ ಮೊದಲ ವಿಮಾನ

ವಿಮಾನಯಾನ ವ್ಯವಹಾರದಲ್ಲಿ ಸುಮಾರು 60 ದಿನಗಳನ್ನು ಪೂರ್ಣಗೊಳಿಸಿದ ನಂತರ, ಭಾರತದ ಕಡಿಮೆ ವೆಚ್ಚದ ವಿಮಾನಯಾನ, ಆಕಾಶ ಏರ್‌ನ ಸಿಇಒ ವಿನಯ್ ದುಬೆ ಅವರು ಮುಂದಿನ ವರ್ಷದ ಮಾರ್ಚ್ ಅಂತ್ಯದ ವೇಳೆಗೆ 18 ಹೊಸ ವಿಮಾನಗಳನ್ನು ಪಡೆಯುವುದಾಗಿ ಘೋಷಿಸಿದರು.

ಮಾರ್ಚ್ 2023 ರ ಅಂತ್ಯದ ವೇಳೆಗೆ ನಾವು 18 ಹೊಸ ಬೋಯಿಂಗ್ 737-MAX ವಿಮಾನಗಳನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಸಿಇಒ ವಿನಯ್ ದುಬೆ ಹೇಳಿದರು. ರಾಕೇಶ್ ಜುಂಜುನ್‌ವಾಲಾ ಅವರ ನಿಧನದ ನಂತರ ವಿಮಾನಯಾನ ಸಂಸ್ಥೆಯ ಕಾರ್ಯತಂತ್ರ ಅಥವಾ ನೀತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ದುಬೆ ದೃಢಪಡಿಸಿದರು.


ABOUT THE AUTHOR

...view details