ಮುಂಬೈ (ಮಹಾರಾಷ್ಟ್ರ): ದೇಶದ ವಿಮಾನಯಾನ ಕ್ಷೇತ್ರಕ್ಕೆ ಮತ್ತೊಂದು ವಿಮಾನ ಸಂಸ್ಥೆ ಪ್ರವೇಶಿಸಲು ಸಿದ್ಧವಾಗಿದೆ. ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಬೆಂಬಲಿತ ಆಕಾಶ ಏರ್ ಸಂಸ್ಥೆಗೆ ವಿಮಾನ ಹಾರಾಟಕ್ಕೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅನುಮತಿ ನೀಡಿದೆ. ಜುಲೈ ಅಂತ್ಯದ ವೇಳೆಗೆ ತನ್ನ ವಾಣಿಜ್ಯ ಕಾರ್ಯಾಚರಣೆ ಆರಂಭಿಸುವುದಾಗಿ ಸಂಸ್ಥೆ ಹೇಳಿದೆ.
ವಿಮಾನಯಾನ ಕಾರ್ಯಾಚರಣೆಯ ಸಿದ್ಧತೆಗಳು ಮತ್ತು ಅಗತ್ಯವಾದ ನಿಯಮಗಳ ಅನುಸರಣೆ ಪೂರೈಸಿದ ನಂತರವೇ ಎಒಸಿ (air operator certificate-AOC) ನೀಡಲಾಗಿದೆ. ಜುಲೈ ಅಂತ್ಯದ ವೇಳೆಗೆ ತಮ್ಮ ವಾಣಿಜ್ಯ ವಿಮಾನಗಳನ್ನು ಪ್ರಾರಂಭಿಸುವ ಗುರಿ ಹೊಂದಿರುವುದಾಗಿ ಸಂಸ್ಥಾಪಕ ಸಿಇಒ ವಿನಯ್ ದುಬೆ ತಿಳಿಸಿದ್ದಾರೆ.