ಕರ್ನಾಟಕ

karnataka

ETV Bharat / bharat

ಶಿರೋಮಣಿ ಅಕಾಲಿ ದಳ ನಾಯಕನಿಗೆ ಗುಂಡಿಕ್ಕಿ ಹತ್ಯೆ - ಎಸ್‌ಎಡಿ ನಾಯಕ ಸುರ್ಜಿತ್ ಸಿಂಗ್

ಎಸ್‌ಎಡಿ ನಾಯಕ ಸುರ್ಜಿತ್ ಸಿಂಗ್ ಅವರನ್ನು ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

SAD leader Surjit Singh
ಎಸ್‌ಎಡಿ ನಾಯಕ ಸುರ್ಜಿತ್ ಸಿಂಗ್

By ETV Bharat Karnataka Team

Published : Sep 29, 2023, 7:29 AM IST

ಹೋಶಿಯಾರ್‌ಪುರ (ಪಂಜಾಬ್): ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ನಾಯಕ ಸುರ್ಜಿತ್ ಸಿಂಗ್ ಅವರನ್ನು ಗುರುವಾರ ಸಂಜೆ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ನಾಯಕ ಹತ್ತಿರದ ಇಲ್ಲಿನ ಕಿರಾಣಿ ಅಂಗಡಿಯ ಹೊರಗೆ ಕುಳಿತಿದ್ದಾಗ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ.

"ಸಂಜೆ 7ಗಂಟೆ ಸುಮಾರಿಗೆ, ಸುರ್ಜಿತ್ ಸಿಂಗ್ ಅವರು ತಮ್ಮ ಪ್ರದೇಶದ ದಿನಸಿ ಅಂಗಡಿಯೊಂದರ ಹೊರಗೆ ಕುಳಿತಿದ್ದರು. ಇಬ್ಬರು ವ್ಯಕ್ತಿಗಳು ಬೈಕ್‌ನಲ್ಲಿ ಬಂದು ಸುರ್ಜಿತ್ ಸಿಂಗ್ ಕಡೆಗೆ ನಾಲ್ಕು ಸುತ್ತು ಗುಂಡು ಹಾರಿಸಿದರು. ತಕ್ಷಣ ಅವರನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು" ಎಂದು ಡಿಎಸ್​ಪಿ ತಲ್ವಿಂದರ್ ಸಿಂಗ್ ಮಾಹಿತಿ ನೀಡಿದರು.

ಎಸ್‌ಎಡಿ ನಾಯಕ ಸುರ್ಜಿತ್ ಸಿಂಗ್ ಅವರು ಮೆಗೋವಾಲ್ ಗಂಜಿಯಾನ್ ಗ್ರಾಮದ ಮಾಜಿ ಸರಪಂಚ್ ಆಗಿದ್ದರು. ಪ್ರಸ್ತುತ ಅವರ ಪತ್ನಿ ಅದೇ ಹುದ್ದೆಯಲ್ಲಿದ್ದಾರೆ. ಹತ್ಯೆಯ ಹಿಂದಿನ ಕಾರಣ ತಿಳಿದು ಬಂದಿಲ್ಲ. ಅಪರಿಚಿತ ದುಷ್ಕರ್ಮಿಗಳಿಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ:ಜಾನುವಾರು ಮೇಯಿಸುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗುಂಡಿನ ಚಕಮಕಿ: 5 ಸಾವು, 8 ಮಂದಿ ಗಾಯ

ABOUT THE AUTHOR

...view details