ನವದೆಹಲಿ:ಕೇಂದ್ರ ಮಾಜಿ ಸಚಿವ ಎ.ಕೆ. ಆ್ಯಂಟನಿ ಹಾಗೂ ಅವರ ಪತ್ನಿ ಎಲಿಜಬೆತ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮಾಜಿ ಕೇಂದ್ರ ಸಚಿವ ಎ.ಕೆ. ಆ್ಯಂಟನಿ ಮತ್ತು ಪತ್ನಿ ಎಲಿಜಬೆತ್ಗೆ ತಗುಲಿದ ಕೊರೊನಾ! - ಎಕೆ ಆ್ಯಂಟನಿಗೆ ಕೊರೊನಾ
ಕೇಂದ್ರ ಮಾಜಿ ಸಚಿವ ಎ.ಕೆ. ಆ್ಯಂಟನಿ ಹಾಗೂ ಅವರ ಪತ್ನಿ ಎಲಿಜಬೆತ್ ಅವರಿಗೆ ಕೊರೊನಾ ತಗುಲಿರುವ ವಿಚಾರವನ್ನು ಪುತ್ರ ಅನಿಲ್ ಕೆ ಆ್ಯಂಟನಿ ಸಾಮಾಜಿಕ ಜಾಲತಾಣಗಳ ಮೂಲಕ ದೃಢಪಡಿಸಿದ್ದಾರೆ.
ಮಾಜಿ ಕೇಂದ್ರ ಸಚಿವ ಎ.ಕೆ. ಆ್ಯಂಟನಿಗೆ ತಗುಲಿದ ಕೊರೊನಾ!
ಈ ಕುರಿತು ಅವರ ಪುತ್ರ ಅನಿಲ್ ಕೆ ಆ್ಯಂಟನಿ ಸಾಮಾಜಿಕ ಜಾಲತಾಣಗಳ ಮೂಲಕ ವಿಷಯವನ್ನು ಶೇರ್ ಮಾಡಿ ದೃಢಪಡಿಸಿದ್ದಾರೆ. ತಂದೆ-ತಾಯಿಯ ಆರೋಗ್ಯ ಸ್ಥಿರವಾಗಿದೆ. ಇಬ್ಬರೂ ಚಿಕಿತ್ಸೆಗಾಗಿ ಏಮ್ಸ್ಗೆ ದಾಖಲಾಗಿದ್ದಾರೆಂದು ಪುತ್ರ ಅನಿಲ್ ಮಾಹಿತಿ ನೀಡಿದ್ದಾರೆ.
ಅನಿಲ್ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಸಚಿನ್ ಪೈಲಟ್, ಇಬ್ಬರೂ ಕೂಡ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಇತ್ತೀಚೆಗಷ್ಟೇ ಹಿರಿಯ ಕಾಂಗ್ರೆಸ್ ನಾಯಕ ಅಹಮ್ಮದ್ ಪಟೇಲ್ ಕೊರೊನಾ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದರು.