ರಾಜಸ್ಥಾನ:ಪ್ರವಾದಿ ಬಗ್ಗೆ ಹೇಳಿಕೆ ನೀಡಿದ ನೂಪುರ್ ಶರ್ಮಾರ ಶಿರಚ್ಛೇದ ಮಾಡಿದಲ್ಲಿ ತನ್ನ ಮನೆ, ಆಸ್ತಿ ನೀಡುವುದಾಗಿ ಘೋಷಿಸಿದ್ದ ಅಜ್ಮೀರ್ ದರ್ಗಾದ ಮುಖ್ಯಸ್ಥನಿಗೆ ಆರೋಪದಿಂದ ತಪ್ಪಿಸಿಕೊಳ್ಳಲು ಪೊಲೀಸ್ ಅಧಿಕಾರಿಯೇ ಉಪಾಯ ಹೇಳಿಕೊಟ್ಟಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಆದರೆ, ಈ ಆರೋಪವನ್ನು ಪೊಲೀಸ್ ಅಧಿಕಾರಿ ತಳ್ಳಿ ಹಾಕಿದರು.
ಅಜ್ಮೀರ್ ದರ್ಗಾದ ಮುಖ್ಯಸ್ಥ ಸಲ್ಮಾನ್ ಚಿಸ್ತಿಯನ್ನು ಪೊಲೀಸರು ಮೊನ್ನೆ ರಾತ್ರಿ ಬಂಧಿಸಿ ಕರೆದುಕೊಂಡು ಬರುತ್ತಿದ್ದಾಗ, "ನೀವು ಪ್ರಚೋದನಾತ್ಮಕ ವಿಡಿಯೋ ಮಾಡುವಾಗ ಯಾವ ಮದ್ಯ ಕುಡಿದಿದ್ದೀರಾ" ಎಂದು ಕೇಳಿದ್ದಾರೆ. ಬಳಿಕ "ಪ್ರಕರಣದಿಂದ ಪಾರಾಗಲು ನಾನು ಆ ಸಮಯದಲ್ಲಿ ಕುಡಿದಿದ್ದಾಗಿ ಹೇಳು" ಎಂದು ಪೊಲೀಸ್ ಅಧಿಕಾರಿ ಸಲಹೆ ನೀಡುತ್ತಿರುವುದು ವಿಡಿಯೋದಲ್ಲಿದೆ.
ಈ ವಿಡಿಯೋವನ್ನು ಬಿಜೆಪಿ ಟ್ವೀಟ್ ಮಾಡಿದ್ದು, ಇದು ರಾಜಸ್ಥಾನ ಸರ್ಕಾರದ ಕಾನೂನುಪಾಲನೆಯಾಗಿದೆ. ಆರೋಪಿಗಳಿಗೆ ಸಹಾಯ ಮಾಡುವುದು ಸರಿಯೇ? ಎಂದು ಪ್ರಶ್ನಿಸಿದ್ದಾರೆ. ಈ ಆರೋಪಿ ವಿಡಿಯೋ ವೈರಲ್ ಆದ ಬಳಿಕ ಸಲಹೆ ನೀಡಿದ್ದ ಪೊಲೀಸ್ ಅಧಿಕಾರಿ ಇದನ್ನು ಅಲ್ಲಗಳೆದಿದ್ದಾರೆ. ಆ ರೀತಿಯಾಗಿ ನಾನು ಹೇಳಿಲ್ಲ. ಅದು ತನಿಖೆಯ ಭಾಗ ಎಂದು ಹೇಳಿಕೊಂಡಿದ್ದಾರೆ.
ಟೈಲರ್ ಕನ್ಹಯ್ಯಾ ಲಾಲ್ ಹತ್ಯೆ ಬಳಿಕ ಅಜ್ಮೀರ್ ದರ್ಗಾದ ಸಲ್ಮಾನ್ ಚಿಸ್ತಿ ವಿಡಿಯೋ ಮಾಡಿ, ಅದರಲ್ಲಿ ನೂಪುರ್ ಶರ್ಮಾರ ತಲೆಯನ್ನು ಕತ್ತರಿಸಿ ತಂದವರಿಗೆ ನನ್ನ ಮನೆ, ಆಸ್ತಿಯನ್ನು ನೀಡುವೆ ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಇದೀಗ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಇದನ್ನೂ ಓದಿ:10 ತಿಂಗಳ ಹೆಣ್ಣು ಮಗುವಿಗೆ ಭಾರತೀಯ ರೈಲ್ವೇ ಇಲಾಖೆಯಲ್ಲಿ ಕೆಲಸ!