ರಾಜಸ್ಥಾನ:ಪ್ರವಾದಿ ಬಗ್ಗೆ ಹೇಳಿಕೆ ನೀಡಿದ್ದ ನೂಪುರ್ ಶರ್ಮಾರ ಶಿರಚ್ಛೇದ ಮಾಡಿದವರಿಗೆ ತನ್ನ ಮನೆ, ಆಸ್ತಿ ನೀಡುವುದಾಗಿ ಆಫರ್ ಮಾಡಿ ಪ್ರಚೋದನಾತ್ಮಕ ವಿಡಿಯೋ ಹರಿಬಿಟ್ಟಿದ್ದ ಅಜ್ಮೇರ್ ದರ್ಗಾದ ವ್ಯವಸ್ಥಾಪಕ ಸಲ್ಮಾನ್ ಚಿಸ್ತಿಯನ್ನು ಪೊಲೀಸರು ನಿನ್ನೆ ರಾತ್ರಿ ಬಂಧಿಸಿದ್ದಾರೆ.
ವಿಡಿಯೋದಲ್ಲೇನಿತ್ತು?:ಮತಾಂಧಸಲ್ಮಾನ್ ಚಿಸ್ತಿ ಪ್ರಚೋದನಾತ್ಮಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಈ ವಿಡಿಯೋದಲ್ಲಿ ಆತ, "ನೂಪುರ್ ಶರ್ಮಾಳನ್ನು ಶೂಟ್ ಮಾಡಿ ಅಥವಾ ತಲೆ ಕಡಿದು ತನ್ನಿ. ಅವರಿಗೆ ನನ್ನ ಮನೆ, ಆಸ್ತಿಯನ್ನು ನೀಡುತ್ತೇನೆ. ಇದು ಸತ್ಯ. ನಮ್ಮ ಹಿರಿಯರ ಆಣೆ" ಎಂದು ಹೇಳಿದ್ದ. ಈ ವಿಡಿಯೋ ವೈರಲ್ ಆಗಿತ್ತು. ಬಳಿಕ ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ಮನೆಯಲ್ಲಿದ್ದ ಸಲ್ಮಾನ್ ಚಿಸ್ತಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.