ರಾಂಚಿ(ಜಾರ್ಖಂಡ್) :ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ ಎಸ್ ಧೋನಿಗೆ ಜಗತ್ತಿನೆಲ್ಲೆಡೆ ಅಭಿಮಾನಿಗಳಿದ್ದಾರೆ. ಆದರೆ, ಹರಿಯಾಣದ ಅಜಯ್ಗಿಲ್ ಎಂಬಾತ ಮಾತ್ರ ಮಾಹಿ ಅಭಿಮಾನಿಗಳಲ್ಲಿ ಕೊಂಚ ವಿಭಿನ್ನ.
ಅಜಯ್ ಗಿಲ್ ಕನಸಿನಲ್ಲಿ ಬಂದಿದ್ದ ಟೀಂ ಇಂಡಿಯಾ ಮಾಜಿ ನಾಯಕ ಧೋನಿ,ರಾಂಚಿಗೆ ಆಹ್ವಾನಿಸಿದ್ದರಂತೆ. ಹಾಗಾಗಿ, ಕಾಲ್ನಡಿಗೆ ಮೂಲಕ ಹರಿಯಾಣದಿಂದ ರಾಂಚಿಗೆ ಬಂದಿದ್ದಾನೆ. ಧೋನಿ ಯಾವಾಗಲೂ ಅಜಯ್ ಗಿಲ್ ಕನಸಲ್ಲಿ ಬರ್ತಿದ್ದರಂತೆ.
ಕಳೆದ ಜುಲೈ 27ರ ರಾತ್ರಿ ಅವರ ಕನಸಲ್ಲಿ ಬಂದ ಎಂಎಸ್ಡಿ, ನೀನು ರಾಂಚಿಯಲ್ಲಿರುವ ಸುಂದರ ಸ್ಥಳವನ್ನು ನೋಡು ಎಂದು ಹೇಳಿದ್ರಂತೆ. ಹಾಗಾಗಿ, ಜುಲೈ 29ರಂದು ಅವರು ಕಾಲ್ನಡಿಗೆಯಲ್ಲಿ ರಾಂಚಿಗೆ ಹೊರಟಿದ್ದಾರೆ.