ಹೈದರಾಬಾದ್:ದೇಶದಲ್ಲಿ ಕೋವಿಡ್ ಸಂಕಷ್ಟದ ಸಮಯದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಸಾಕಷ್ಟು ನೆರವು ನೀಡುತ್ತಿದ್ದಾರೆ. ಈ ಸಾಲಿಗೆ ಬಾಲಿವುಡ್ ನಟ ಅಜಯ್ ದೇವಗನ್ ಕೂಡ ಸೇರ್ಪಡೆಯಾಗಿದ್ದಾರೆ.
ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ (ಬಿಎಂಸಿ)ಗೆ 20 ಹಾಸಿಗೆಯ ತಾತ್ಕಾಲಿಕ ಕೋವಿಡ್ ಐಸಿಯು ವಾರ್ಡ್ ನಿರ್ಮಿಸಲು ತನ್ನ ಸ್ನೇಹಿತರು ಮತ್ತು ಚಿತ್ರೋದ್ಯಮದ ಗಣ್ಯರ ನೆರವಿನಿಂದ ಗಮನಾರ್ಹವಾದ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾರೆ.
ವೆಬ್ಲಾಯ್ಡ್ ವರದಿಯ ಪ್ರಕಾರ, ತಾತ್ಕಾಲಿಕ ಆಸ್ಪತ್ರೆಯನ್ನು ಮುಂಬೈನ ಶಿವಾಜಿ ಪಾರ್ಕ್ ಪ್ರದೇಶದಲ್ಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಲ್ನಲ್ಲಿ ನಿರ್ಮಿಸಲಾಗುತ್ತದೆ. ಅಜಯ್ ದೇವಗನ್ ಅವರ ಸಂಸ್ಥೆಯಾದ ಎನ್.ವೈ. ಫೌಂಡೇಶನ್ ಉದಾತ್ತ ಕೆಲಸಕ್ಕಾಗಿ ಬಿಎಂಸಿಗೆ 1 ಕೋಟಿ ದೇಣಿಗೆ ನೀಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.