ಮುಂಬೈ (ಮಹಾರಾಷ್ಟ್ರ): ಭಾರತದ ಪ್ರಮುಖ ದೂರಸಂಪರ್ಕ ಸೇವಾ ಪೂರೈಕೆದಾರ ಭಾರ್ತಿ ಏರ್‌ಟೆಲ್ ಮುಂಬೈನಲ್ಲಿ 1 ಮಿಲಿಯನ್ (10 ಲಕ್ಷ) 5G ಬಳಕೆದಾರರ ಮಾರ್ಕ್ ದಾಟಿದೆ ಎಂದು ಗುರುವಾರ ಪ್ರಕಟಿಸಿದೆ. ಅಲ್ಟ್ರಾಫಾಸ್ಟ್ ಏರ್‌ಟೆಲ್ 5G ಪ್ಲಸ್ ಅನ್ನು ಪಡೆದ ಮೊದಲ ಎಂಟು ನಗರಗಳಲ್ಲಿ ಮುಂಬೈ ಕೂಡಾ ಒಂದಾಗಿದೆ ಎಂದು ಅದು ಕಂಪನಿಯ ಪ್ರಕಟಣೆಯಲ್ಲಿ ಹೇಳಲಾಗಿದೆ. ಏರ್‌ಟೆಲ್ ಇತ್ತೀಚೆಗೆ ತನ್ನ 5G ನೆಟ್‌ವರ್ಕ್‌ನಲ್ಲಿ ಭಾರತದಾದ್ಯಂತ 10 ಮಿಲಿಯನ್ ಅನನ್ಯ ಗ್ರಾಹಕರ ಮಟ್ಟವನ್ನು ದಾಟಿದೆ. ಮಾರ್ಚ್ 2024 ರ ಅಂತ್ಯದ ವೇಳೆಗೆ ಪ್ರತಿ ಪಟ್ಟಣ ಮತ್ತು ಪ್ರಮುಖ ಗ್ರಾಮೀಣ ಪ್ರದೇಶಗಳಲ್ಲಿ 5G ಸೇವೆ ನೀಡಲು ಸಿದ್ಧವಾಗಿರುವುದಾಗಿ ಏರ್‌ಟೆಲ್ ಹೇಳಿದೆ.
ಭಾರ್ತಿ ಏರ್‌ಟೆಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಭೋರ್ ಗುಪ್ತಾ ಮಾತನಾಡಿ, 1 ಮಿಲಿಯನ್ ಮುಂಬೈಕರ್ ಜನ ಈಗಾಗಲೇ ಅಲ್ಟ್ರಾಫಾಸ್ಟ್ ಏರ್‌ಟೆಲ್ 5G ಪ್ಲಸ್ ಅನ್ನು ಬಳಸುತ್ತಿರುವುದು ನಿಜವಾಗಿಯೂ ಗಮನಾರ್ಹವಾಗಿದೆ. ನಾವು ನಮ್ಮ ನೆಟ್‌ವರ್ಕ್ ಅನ್ನು ನಗರದಾದ್ಯಂತ ಹೆಚ್ಚಿನ ಸ್ಥಳಗಳಿಗೆ ವಿಸ್ತರಿಸುವುದನ್ನು ಮುಂದುವರಿಸುತ್ತೇವೆ ಮತ್ತು ಹೆಚ್ಚಿನ ಗ್ರಾಹಕರಿಗೆ ಸೂಪರ್‌ಫಾಸ್ಟ್ ನೆಟ್ವರ್ಕ್ ಆನಂದಿಸಲು ಅನುವು ಮಾಡಿಕೊಡುತ್ತೇವೆ. ಹೈ- ಡೆಫಿನಿಷನ್ ವಿಡಿಯೋ ಸ್ಟ್ರೀಮಿಂಗ್, ಗೇಮಿಂಗ್, ಮಲ್ಟಿಪಲ್ ಚಾಟಿಂಗ್, ಫೋಟೋಗಳ ತ್ವರಿತ ಅಪ್‌ಲೋಡ್ ಮತ್ತು ಇನ್ನೂ ಹೆಚ್ಚಿನವು ಈಗ ಸಾಧ್ಯವಾಗಲಿದೆ ಎಂದರು.
ನಗರದ ಯಾವ- ಯಾವ ಸ್ಥಳದಲ್ಲಿ 5 ಜಿ ಸೇವೆ ಲಭ್ಯ:ಏರ್‌ಟೆಲ್ 5G ಪ್ಲಸ್ ಪ್ರಸ್ತುತ ಮುಂಬೈನ ಗೇಟ್‌ವೇ ಆಫ್ ಇಂಡಿಯಾ, ನಾರಿಮನ್ ಪಾಯಿಂಟ್, ಫಿಲ್ಮ್ ಸಿಟಿ, ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್, ಘಾಟ್‌ಕೋಪರ್ ಮತ್ತು ಅಂಧೇರಿಯ ಮುಂಬೈ ಮೆಟ್ರೋ ಜಂಕ್ಷನ್‌ಗಳು, ಛತ್ರಪತಿ ಶಿವಾಜಿ ರೈಲ್ವೇ ಟರ್ಮಿನಸ್ (CST) ಸೇರಿದಂತೆ ಹಲವಾರು ಪ್ರಮುಖ ಸ್ಥಳಗಳಲ್ಲಿ ಲೈವ್ ಆಗಿದೆ. ಕಳೆದ ಒಂದು ವರ್ಷದಲ್ಲಿ ಏರ್‌ಟೆಲ್ ತನ್ನ 5G ಸಾಮರ್ಥ್ಯವನ್ನು ಪ್ರದರ್ಶಿಸಿದೆ.