ನವದೆಹಲಿ: ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ದೇಶದ ಅನ್ನದಾತರು ಬರೋಬ್ಬರಿ 1 ವರ್ಷದ ನಂತರ ಪ್ರತಿಭಟನೆ ಹಿಂಪಡೆದುಕೊಂಡಿದ್ದು, ಇದೀಗ ಮನೆಗಳತ್ತ ಮುಖ ಮಾಡಿದ್ದಾರೆ. ಆಂದೋಲನ ಅಂತ್ಯ ಮಾಡಿ ಮನೆ ಕಡೆ ತೆರಳುತ್ತಿರುವ ರೈತರ ಮೇಲೆ ವಿಮಾನವೊಂದು ಹೂವಿನ ಸುರಿಮಳೆಯನ್ನೇ ಹರಿಸಿದೆ.
ದೆಹಲಿಯ ಗಡಿಯಲ್ಲಿ ತಾತ್ಕಾಲಿಕ ವಸತಿ ಟೆಂಟ್ ಕಿತ್ತು ಹಾಕಿ, ಇದೀಗ ಸಾವಿರಾರು ರೈತರು ತಮ್ಮ ಮನೆಗಳತ್ತ ಪ್ರಯಾಣ ಪ್ರಾರಂಭಿಸಿದ್ದಾರೆ. ಟ್ರ್ಯಾಕ್ಟರ್ ಹಾಗೂ ವಿವಿಧ ವಾಹನಗಳಲ್ಲಿ ಅವರು ತೆರಳುತ್ತಿದ್ದ ವೇಳೆ ಅವರ ಮೇಲೆ ವಿಮಾನ ಹೂವಿನ ಸುರಿಮಳೆಯನ್ನೇ ಹರಿಸಿದೆ.
ಕೇಂದ್ರ ಸರ್ಕಾರ ಕಳೆದ ವರ್ಷದ ಸಂಸತ್ ಅಧಿವೇಶನದ ಸಂದರ್ಭದಲ್ಲಿ ವಿವಾದಿತ ಕೃಷಿ ಕಾಯ್ದೆ ಜಾರಿಗೊಳಿಸುತ್ತಿರುವುದಾಗಿ ತಿಳಿಸಿತ್ತು. ಇವುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ರೈತರು ರಸ್ತೆಗಳಿದು ಕಳೆದ ಒಂದು ವರ್ಷದಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದರು.