ಮುಂಬೈ: ಅಗ್ಗದರದ ವಿಮಾನಯಾನ ಕಂಪನಿ ಏರ್ ಏಷ್ಯಾ, ಪಶ್ಚಿಮ ಬಂಗಾಳಕ್ಕೆ ಹೋಗುವ ಹಾಗೂ ಅಲ್ಲಿಂದ ಬರುವ ವಿಮಾನ ಟಿಕೆಟ್ ಬುಕ್ಕಿಂಗ್ ಕ್ಯಾನ್ಸಲೇಶನ್ ಶುಲ್ಕ ಹಾಗೂ ರಿಶೆಡ್ಯೂಲಿಂಗ್ ಶುಲ್ಕಗಳನ್ನು ರದ್ದುಗೊಳಿಸಿದೆ. ಬಂಗಾಳದಲ್ಲಿ 15 ದಿನಗಳ ಕಾಲ ಲಾಕ್ಡೌನ್ ಘೋಷಣೆಯಾದ ಕಾರಣ ಏರ್ ಏಷ್ಯಾ ಈ ಕ್ರಮ ಪ್ರಕಟಿಸಿದೆ.
ಅದೇ ರೀತಿ ಕರ್ನಾಟಕ, ದೆಹಲಿ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಿಗೆ ಹೋಗುವ ಹಾಗೂ ಅಲ್ಲಿಂದ ಬರುವ ವಿಮಾನಯಾನಗಳಿಗೆ ಇದೇ ರೀತಿಯ ರಿಯಾಯಿತಿ ಕ್ರಮಗಳನ್ನು ಕಂಪನಿ ಈ ಹಿಂದೆಯೇ ಘೋಷಿಸಿದೆ.
ಕರ್ನಾಟಕ, ದೆಹಲಿ ಹಾಗೂ ತಮಿಳುನಾಡುಗಳಲ್ಲಿ ಮೇ 24ರವರೆಗೆ, ಪಶ್ಚಿಮ ಬಂಗಾಳದಲ್ಲಿ ಮೇ 30ರವರೆಗೆ ಹಾಗೂ ಮಹಾರಾಷ್ಟ್ರದಲ್ಲಿ ಜೂನ್ 1ರವರೆಗೆ ಲಾಕ್ಡೌನ್ ಇರಲಿದೆ.