ಕರ್ನಾಟಕ

karnataka

ETV Bharat / bharat

ಭಾರತೀಯ ವಾಯುಸೇನೆಯ ಮುಂದಿನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ವಿ. ಆರ್ ಚೌಧರಿ ಆಯ್ಕೆ.. - Air Marshal VR Chaudhari

ಸೆಪ್ಟೆಂಬರ್ 30 ರಂದು ಆರ್‌ಕೆಎಸ್ ಬದೌರಿಯಾ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಅದೇ ದಿನ ವಾಯುಪಡೆಯ 27ನೇ ಮುಖ್ಯಸ್ಥರಾಗಿ ಚೌಧರಿ ಅಧಿಕಾರ ಸ್ವೀಕರಿಸಲಿದ್ದಾರೆ.

Air Marshal VR Chaudhari To Be New Chief Of Air Staff
ಏರ್ ಮಾರ್ಷಲ್ ವಿ.ಆರ್ ಚೌಧರಿ

By

Published : Sep 21, 2021, 11:12 PM IST

ನವದೆಹಲಿ:ಭಾರತೀಯ ವಾಯುಸೇನೆಯ ಮುಂದಿನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ವಿ. ಆರ್ ಚೌಧರಿ ಆಯ್ಕೆಯಾಗಿದ್ದಾರೆ. ಇದೇ ತಿಂಗಳ ಕೊನೆಗೆ ವಾಯುಸೇನೆ ಮುಖ್ಯಸ್ಥರಾದ ಆರ್.​ ಕೆ.ಎಸ್.ಬದೌರಿಯಾ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಹೀಗಾಗಿ, ರಕ್ಷಣಾ ಇಲಾಖೆ ನೂತನ ಮುಖ್ಯಸ್ಥರನ್ನು ಆಯ್ಕೆ ಮಾಡಿದೆ.

ಸೆಪ್ಟೆಂಬರ್ 30ರಂದು ಆರ್‌ಕೆಎಸ್ ಬದೌರಿಯಾ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಅದೇ ದಿನ ವಾಯುಪಡೆಯ 27ನೇ ಮುಖ್ಯಸ್ಥರಾಗಿ ಚೌಧರಿ ಅಧಿಕಾರ ಸ್ವೀಕರಿಸಲಿದ್ದಾರೆ.

ಭಾರತೀಯ ವಾಯುಸೇನೆ ನೂತನ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ವಿಆರ್ ಚೌಧರಿ ಡಿಸೆಂಬರ್ 29, 1982ರಲ್ಲಿ ವಾಯುಪಡೆಯ ಫೈಟರ್ ಸ್ಟ್ರೀಮ್‌ಗೆ ನಿಯೋಜನೆಗೊಂಡಿದ್ದರು. ಸದ್ಯ ವಾಯುಪಡೆಯ ವೈಸ್ ಚೀಫ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ವಾಯುಪಡೆಯ ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಠ ಸೇವಾ ಪದಕ ಹಾಗೂ ವಾಯುಸೇನಾ ಪದಕಕ್ಕೆ ಭಾಜನರಾಗಿದ್ದಾರೆ.

ಓದಿ:ಕೋವಿಶೀಲ್ಡ್ ಲಸಿಕೆ ಅನ್ನು ಗುರುತಿಸದಿರುವುದು 'ತಾರತಮ್ಯ ನೀತಿ': ವಿದೇಶಾಂಗ ಕಾರ್ಯದರ್ಶಿ ಹರ್ಷ ಶೃಂಗ್ಲಾ

ABOUT THE AUTHOR

...view details