ಕರ್ನಾಟಕ

karnataka

ETV Bharat / bharat

ಪೇಸ್ಟ್​ ರೂಪದಲ್ಲಿ ಚಿನ್ನ ಕಳ್ಳಸಾಗಾಣೆ ಯತ್ನ: ಕಣ್ಣೂರು ಏರ್ಪೋರ್ಟ್‌ನಲ್ಲಿ ವ್ಯಕ್ತಿ ಬಂಧನ - ವಿಮಾನ ನಿಲ್ದಾಣ

302 ಗ್ರಾಂ ಚಿನ್ನವನ್ನು ಅತ್ಯಂತ ತೆಳುವಾದ ಪೇಸ್ಟ್ ರೂಪದಲ್ಲಿ ಮಾಡಿ, ಅದನ್ನು ಡಬಲ್ ಲೇಯರ್ ಪ್ಯಾಂಟ್​ಗೆ ಹಚ್ಚಿ ಕಳ್ಳಸಾಗಾಣೆ ಮಾಡಲು ಯತ್ನಿಸಿದ್ದ ವ್ಯಕ್ತಿಯನ್ನು ಏರ್ ಇಂಟೆಲಿಜೆನ್ಸ್ ಯುನಿಟ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

Kannur airport
ಪೇಸ್ಟ್​ ರೂಪದಲ್ಲಿ ಚಿನ್ನ ಕಳ್ಳಸಾಗಾಣೆ

By

Published : Aug 30, 2021, 10:39 AM IST

ಕಣ್ಣೂರು (ಕೇರಳ):ಇತ್ತೀಚೆಗೆ ರಾಜ್ಯದಲ್ಲಿ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣಗಳು ಹೆಚ್ಚು ಕೇಳಿ ಬರುತ್ತಿವೆ. ಇದೀಗ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 302 ಗ್ರಾಂ ಚಿನ್ನವನ್ನು ಪೇಸ್ಟ್​ ರೂಪದಲ್ಲಿ ಕಳ್ಳಸಾಗಾಣೆ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

302 ಗ್ರಾಂ ಚಿನ್ನವನ್ನು ಅತ್ಯಂತ ತೆಳುವಾದ ಪೇಸ್ಟ್ ರೂಪದಲ್ಲಿ ಮಾಡಿ, ಅದನ್ನು ಡಬಲ್ ಲೇಯರ್ ಪ್ಯಾಂಟ್​ಗೆ ಹಚ್ಚಿ ಕಳ್ಳಸಾಗಾಣೆ ಮಾಡಲು ಪ್ರಯಾಣಿಕರೊಬ್ಬರು ಯತ್ನಿಸಿದ್ದರು. ಏರ್​ಪೋರ್ಟ್​ನಲ್ಲಿ ಏರ್ ಇಂಟೆಲಿಜೆನ್ಸ್ ಯುನಿಟ್ ತಪಾಸಣೆ ಮಾಡುವ ಸಂದರ್ಭದಲ್ಲಿ ಚಿನ್ನ ಇರುವುದು ಪತ್ತೆಯಾಗಿದೆ. ಸದ್ಯ ವ್ಯಕ್ತಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಜುಲೈ ತಿಂಗಳಲ್ಲಿ ಇದೇ ವಿಮಾನ ನಿಲ್ದಾಣದ ಡಸ್ಟ್​ಬಿನ್​ನಲ್ಲಿ ಅಡಗಿಸಿಟ್ಟಿದ್ದ ಒಂದು ಕೋಟಿ ರೂ.ಮೌಲ್ಯದ ಚಿನ್ನವು ಸ್ವಚ್ಛಗೊಳಿಸುತ್ತಿದ್ದ ಸಿಬ್ಬಂದಿ ಕೈಗೆ ಸಿಕ್ಕಿತ್ತು. ಇದನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ABOUT THE AUTHOR

...view details