ಕರ್ನಾಟಕ

karnataka

ETV Bharat / bharat

ಮೂತ್ರ ವಿಸರ್ಜನೆ ಪ್ರಕರಣ: ಏರ್ ಇಂಡಿಯಾ ಸಂಸ್ಥೆಗೆ 30 ಲಕ್ಷ ದಂಡ, ಪೈಲಟ್ ಲೈಸನ್ಸ್​ ಅಮಾನತು - ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ

ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಪ್ರಕರಣದಲ್ಲಿ ವಿಮಾನಯಾನ ಅಗತ್ಯತೆಗಳನ್ನು ಉಲ್ಲಂಘಿಸಿದ್ದಕ್ಕಾಗಿ​ ಏರ್ ಇಂಡಿಯಾಕ್ಕೆ 30 ಲಕ್ಷ ರೂಪಾಯಿಗಳ ದಂಡವನ್ನು ಡಿಜಿಸಿಎ ಹಾಕಿದೆ.

air-india-urination-case-dgca-slaps-rs-30-lakh-penalty-on-ai-suspends-pilots-licence-for-3-months
ಮೂತ್ರ ವಿಸರ್ಜನೆ ಪ್ರಕರಣ: ಏರ್ ಇಂಡಿಯಾ ಸಂಸ್ಥೆಗೆ 30 ಲಕ್ಷ ದಂಡ, ಪೈಲಟ್ ಲೈಸನ್ಸ್​ ಅಮಾನತು

By

Published : Jan 20, 2023, 3:42 PM IST

Updated : Jan 20, 2023, 4:35 PM IST

ನವದೆಹಲಿ: ವಿಮಾನದಲ್ಲಿ ಮಹಿಳಾ ಮೇಲೆ ಪುರುಷ ಪ್ರಯಾಣಿಕ ಮೂತ್ರ ವಿಸರ್ಜನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) 30 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇದೇ ವೇಳೆ, ವಿಮಾನದ ಪೈಲಟ್ ಇನ್ ಕಮಾಂಡ್‌ನ ಪರವಾನಗಿಯನ್ನು ಮೂರು ತಿಂಗಳ ಕಾಲ ಅಮಾನತುಗೊಳಿಸಿ ಡಿಜಿಸಿಎ ಆದೇಶಿಸಿದೆ.

ಕಳೆದ ವರ್ಷ ನವೆಂಬರ್ 26ರಂದು ನ್ಯೂಯಾರ್ಕ್​ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ಶಂಕರ್ ಮಿಶ್ರಾ ಎಂಬ ವ್ಯಕ್ತಿ ಮದ್ಯದ ಅಮಲಿನಲ್ಲಿ 70 ವರ್ಷದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಈ ಘಟನೆ ಇದೇ ಜನವರಿ 4ರಂದು ಬೆಳಕಿಗೆ ಬಂದ ಬಳಿಕ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿತ್ತು.

ಇದನ್ನೂ ಓದಿ:ಮೂತ್ರ ವಿಸರ್ಜನೆಯಂಥ ಪ್ರಕರಣ ಪುನರಾವರ್ತನೆಯಾಗದಂತೆ ಕ್ರಮ; ಟಾಟಾ ಸನ್ಸ್​ ಅಧ್ಯಕ್ಷರ ಹೇಳಿಕೆ

ಇದೀಗ ವಿಮಾನಯಾನ ಸಂಸ್ಥೆಗೆ ಭಾರಿ ಮೊತ್ತ ದಂಡ ವಿಧಿಸಿ ಮತ್ತು ಪೈಲಟ್ ಲೈಸನ್ಸ್​ ಅಮಾನತು ಮಾಡಿದ ಬಗ್ಗೆ ಡಿಜಿಸಿಎ ಅಧಿಸೂಚನೆ ಹೊರಡೆಸಿದ್ದು, 1937ರ ವಿಮಾನ ನಿಯಮಗಳಲ್ಲಿನ 141ರ ನಿಯಮ ಮತ್ತು ನಾಗರಿಕ ವಿಮಾನಯಾನ ಅಗತ್ಯತೆಗಳ ಪ್ರಕಾರ ತನ್ನ ಕರ್ತವ್ಯಗಳನ್ನು ನಿರ್ವಹಿಸಲು ವಿಫಲವಾದ ಕಾರಣ ಪೈಲಟ್ ಇನ್ ಕಮಾಂಡ್‌ನ ಪರವಾನಗಿಯನ್ನು ಮೂರು ತಿಂಗಳ ಅವಧಿಗೆ ಅಮಾನತುಗೊಳಿಸಲಾಗಿದೆ. ಜೊತೆಗೆ ವಿಮಾನಯಾನ ಅಗತ್ಯತೆಗಳನ್ನು ಉಲ್ಲಂಘಿಸಿದ್ದಕ್ಕಾಗಿ​ ಏರ್ ಇಂಡಿಯಾಕ್ಕೆ 30 ಲಕ್ಷ ರೂಪಾಯಿಗಳ ಆರ್ಥಿಕ ದಂಡವನ್ನು ವಿಧಿಸಲಾಗಿದೆ ಎಂದು ತಿಳಿಸಿದೆ.

ಈ ಹಿಂದೆ ಏರ್ ಇಂಡಿಯಾದ ಅಕೌಂಟೆಬಲ್ ಮ್ಯಾನೇಜರ್, ಇನ್ ಫ್ಲೈಟ್​​ ಸೇವೆಗಳ ನಿರ್ದೇಶಕರು ಮತ್ತು ಆ ವಿಮಾನದ ಎಲ್ಲ ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿ ವಿರುದ್ಧ ಏಕೆ ಜಾರಿ ಕ್ರಮ ತೆಗೆದುಕೊಳ್ಳಬಾರದು ಎಂದು ಪ್ರಶ್ನಿಸಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಲಿಖಿತ ಉತ್ತರ ನೀಡಿದ್ದ ಏರ್ ಇಂಡಿಯಾ ಸಂಸ್ಥೆಯು ವಿಮಾನದ ಎಲ್ಲ ಸಿಬ್ಬಂದಿ ವಿರುದ್ಧ ತನಿಖೆ ಒಳಪಡಿಸಲಾಗಿತ್ತು ಎಂದು ತಿಳಿಸಿತ್ತು. ಇದರ ಆಧಾರದ ಮೇಲೆಯೇ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಡಿಜಿಸಿಎ ಹೇಳಿದೆ.

ಪ್ರಕರಣದ ಹಿನ್ನೆಲೆ: ಕಳೆದ ವರ್ಷ ನವೆಂಬರ್ 26ರಂದು ನ್ಯೂಯಾರ್ಕ್​ನಿಂದ ದೆಹಲಿಗೆ ಏರ್ ಇಂಡಿಯಾ (ಎಐ-102) ವಿಮಾನದ ಬರುತ್ತಿತ್ತು. ಈ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದ ಶಂಕರ್ ಮಿಶ್ರಾ ಕುಡಿದ ನಶೆಯಲ್ಲಿ ಪಕ್ಕದ ಸೀಟಿನಲ್ಲಿದ್ದ 70 ವರ್ಷದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಈ ಸಂತಸ್ತ ಮಹಿಳೆ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ ದೂರು ನೀಡಿದ್ದರು.

ಈ ದೂರಿನ ಆಧಾರದ ಮೇರೆಗೆ ಜನವರಿ 4ರಂದು ಆರೋಪಿ ಶಂಕರ್​ ಮಿಶ್ರಾ ವಿರುದ್ಧ ಐಪಿಸಿ ಸೆಕ್ಷನ್ 354, 509, ಮತ್ತು 510 ಮತ್ತು ಭಾರತೀಯ ವಿಮಾನ ಕಾಯಿದೆ 23ರ ಅಡಿಯಲ್ಲಿ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಇದಾದ ನಂತರ ಬೆಂಗಳೂರಿನಲ್ಲಿ ಜನವರಿ 7ರಂದು ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಈ ಘಟನೆಯ ನಂತರ ವೆಲ್ಸ್ ಫಾರ್ಗೋ ಎಂಬ ಅಮೆರಿಕದ ಮೂಲದ ಹಣಕಾಸು ಸೇವೆಗಳ ಕಂಪನಿಯು ಶಂಕರ್ ಮಿಶ್ರಾನನ್ನು ಕೆಲಸದಿಂದ ವಜಾಗೊಳಿಸಿತ್ತು. ಅಲ್ಲದೇ, ಶಂಕರ್ ಮಿಶ್ರಾ ಮೇಲೆ ನಾಲ್ಕು ತಿಂಗಳ ಕಾಲ ವಿಮಾನಯಾನ ಮಾಡುವುದಕ್ಕೆ ಏರ್ ಇಂಡಿಯಾ ಸಹ ನಿಷೇಧ ಹೇರಿದೆ.

ಇದನ್ನೂ ಓದಿ:ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಕೇಸ್​: 4 ಗ್ಲಾಸ್ ವಿಸ್ಕಿ ಕುಡಿದು ತೇಲಾಡುತ್ತಿದ್ದ ಆರೋಪಿ!

Last Updated : Jan 20, 2023, 4:35 PM IST

ABOUT THE AUTHOR

...view details