ನವದೆಹಲಿ:ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರುವ ಭೀತಿ ದಟ್ಟವಾದ ಹಿನ್ನೆಲೆಯಲ್ಲಿ ಉಕ್ರೇನ್ನಲ್ಲಿರುವ ಭಾರತೀಯರನ್ನು ರಕ್ಷಿಸಲು ಭಾರತ ಸರ್ಕಾರ ವಿಶೇಷ ವಿಮಾನ ವ್ಯವಸ್ಥೆ ಮಾಡಿದೆ. ಇಂದು ರಾತ್ರಿ ಉಕ್ರೇನ್ನಿಂದ ಭಾರತೀಯ ಪ್ರಜೆಗಳನ್ನು ಹೊತ್ತ ಏರ್ ಇಂಡಿಯಾ ವಿಮಾನ ಭಾರತಕ್ಕೆ ಹಾರಲಿದೆ.
ಉಕ್ರೇನ್ ತೊರೆಯಲು ಇಚ್ಚಿಸಿ ನೋಂದಾಯಿಸಿಕೊಂಡಿದ್ದ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಕರೆತರಲು ಟಾಟಾ ಒಡೆತನದ ಏರ್ ಇಂಡಿಯಾದ ಮೂರು ವಿಮಾನಗಳಲ್ಲಿ ಒಂದು ವಿಮಾನ ಇಂದು ರಾತ್ರಿಯೇ ನಾಗರಿಕರನ್ನು ಕರೆತರಲಿದೆ ಎಂದು ವಿಮಾನಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು.