ನವದೆಹಲಿ:ಕೇಂದ್ರ ಸರ್ಕಾರಿ ಒಡೆತನದ ವಿಮಾನಯಾನ ಸಂಸ್ಥೆಯ ಏರ್ ಇಂಡಿಯಾ ಮೇಲೆ ಸೈಬರ್ ದಾಳಿ ನಡೆದಿದ್ದು, ಲಕ್ಷಾಂತರ ಪ್ರಯಾಣಿಕರ ವೈಯಕ್ತಿಕ ವಿವರಗಳು ಸೋರಿಕೆಯಾಗಿವೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
2011 ಆಗಸ್ಟ್ 26ರಿಂದ 2021 ಫೆಬ್ರವರಿ 3ರವರೆಗೆ ದಾಖಲಿಸಿಕೊಳ್ಳಲಾಗಿದ್ದ ಪ್ರಯಾಣಿಕರ ಮಾಹಿತಿ ಸೋರಿಕೆಯಾಗಿದೆ. ಈ ಮಾಹಿತಿಯಲ್ಲಿ ಏರ್ ಇಂಡಿಯಾ ಗ್ರಾಹಕರ ಹೆಸರು, ಜನ್ಮದಿನಾಂಕ, ಸಂಪರ್ಕ ವಿಳಾಸ, ಪಾಸ್ಪೋರ್ಟ್ ಮಾಹಿತಿ, ಟಿಕೆಟ್ ಮುಂತಾದ ಮಾಹಿತಿಯನ್ನು ಕದಿಯಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಈ ದಾಳಿಯಿಂದ ಸುಮಾರು ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ದತ್ತಾಂಶಗಳು ಸೋರಿಕೆಯಾಗಿದ್ದು, ಜಗತ್ತಿನಾದ್ಯಂತ ಇದ್ದ ಏರ್ ಇಂಡಿಯಾ ಪ್ರಯಾಣಿಕರಿಗೆ ಇದರಿಂದ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಕುರಿತು ಅಧಿಕೃತ ಪ್ರಕಟಣೆ ನೀಡಿರುವ ಏರ್ ಇಂಡಿಯಾ ಕಂಪನಿ ಎಸ್ಐಟಿಎ ಪಿಎಸ್ಎಸ್ (SITA PSS) ಎಂಬ ಏರ್ ಇಂಡಿಯಾದ ಪ್ರಯಾಣಿಕರ ಮಾಹಿತಿ ವ್ಯವಸ್ಥೆ ಸೈಬರ್ ದಾಳಿಗೆ ಒಳಗಾಗಿದೆ.