ಕರ್ನಾಟಕ

karnataka

ETV Bharat / bharat

ಹೈದರಾಬಾದ್‌ನಿಂದ ಲಂಡನ್‌ಗೆ ತಡೆರಹಿತ ನೇರ ವಿಮಾನ ಸೇವೆ ಆರಂಭಿಸಿದ ಏರ್‌ ಇಂಡಿಯಾ

ಭಾರತೀಯರಿಗೆ ಯುರೋಪ್ ಅತ್ಯಂತ ಪ್ರಿಯವಾದ ತಾಣವಾಗಿದೆ. ಏರ್‌ ಇಂಡಿಯಾ ಹೈದಾರಾಬಾದ್‌ನಿಂದ ಲಂಡನ್‌ಗೆ ತಡೆ ರಹಿತ ವಿಮಾನ ಸೇವೆ ಕಲ್ಪಿಸಿರುವುದು ಅನುಕೂಲವಾಗಲಿದೆ. ಲಂಡನ್‌ನಲ್ಲಿ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳು ಹಾಗೂ ಮುಂಬರುವ ವರ್ಷಗಳಲ್ಲಿ ವ್ಯಾಪಾರದ ಅವಕಾಶಗಳನ್ನು ವಿಸ್ತರಿಸಲು ಈ ಸೇವೆ ಸಹಕಾರಿಯಾಗಿದೆ..

Air India launches direct flight from Hyd to London
ಹೈದರಾಬಾದ್‌ನಿಂದ ಲಂಡನ್‌ಗೆ ತಡೆರಹಿತ ನೇರ ವಿಮಾನ ಸೇವೆ ಆರಂಭಿಸಿದ ಏರ್‌ ಇಂಡಿಯಾ

By

Published : Sep 10, 2021, 7:19 PM IST

ಹೈದಾರಾಬಾದ್‌ :ಏರ್ ಇಂಡಿಯಾ ಇದೇ ಮೊದಲ ಬಾರಿಗೆ ಹೈದರಾಬಾದ್ ನಿಂದ ಲಂಡನ್‌ಗೆ ನೇರ ವಿಮಾನ ಸೇವೆಯನ್ನು ಆರಂಭಿಸಿದೆ. ಇಂದು ಮಧ್ಯರಾತ್ರಿ ಎಐ 147 ವಿಮಾನ ಹೈದರಾಬಾದ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಪ್ರಯಾಣ ಬೆಳೆಸಿತು. ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಗಳು, ಏರ್ ಇಂಡಿಯಾ ಅಧಿಕಾರಿಗಳು ಟರ್ಮಿನಲ್‌ನಲ್ಲಿ ಹಾಜರಿದ್ದರು.

ಏರ್‌ ಇಂಡಿಯಾ ವಿಮಾನಗಳು ಹೈದರಾಬಾದ್ ಮತ್ತು ಹೀಥ್ರೂ ವಿಮಾನ ನಿಲ್ದಾಣದ ನಡುವೆ ತಡೆ ರಹಿತವಾಗಿ ವಾರದಲ್ಲಿ ಎರಡು ಬಾರಿ (ಸೋಮವಾರ,ಶುಕ್ರವಾರ) ಹಾರಾಟ ನಡೆಸಲಿವೆ.

ಏರ್ ಇಂಡಿಯಾ ವಿಮಾನ ಎಐ-147 ಹೈದರಾಬಾದ್ ನಿಂದ ಸೋಮವಾರ ಮಧ್ಯರಾತ್ರಿ 1.30ಕ್ಕೆ ಹೊರಟು ಹೀಥ್ರೂ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 7.30ಕ್ಕೆ (ಸ್ಥಳೀಯ ಕಾಲಮಾನ) ತಲುಪಲಿದೆ. ಅದೇ ವಿಮಾನವು ಶುಕ್ರವಾರ ಬೆಳಿಗ್ಗೆ 5.30 ಕ್ಕೆ ಹೈದರಾಬಾದ್ ನಿಂದ ಹೊರಟು 11.30 ಕ್ಕೆ (ಸ್ಥಳೀಯ ಸಮಯ) ಲಂಡನ್ ತಲುಪಲಿದೆ. ರಿಟರ್ನ್ ಫ್ಲೈಟ್ AI 148 ಲಂಡನ್‌ನಿಂದ ಬೆಳಿಗ್ಗೆ 9.45 ಕ್ಕೆ (ಸ್ಥಳೀಯ ಸಮಯ) ಹೊರಟು 11.35 ಕ್ಕೆ ಹೈದರಾಬಾದ್ ತಲುಪುತ್ತದೆ.

ಭಾರತೀಯರಿಗೆ ಯುರೋಪ್ ಅತ್ಯಂತ ಪ್ರಿಯವಾದ ತಾಣವಾಗಿದೆ. ಏರ್‌ ಇಂಡಿಯಾ ಹೈದಾರಾಬಾದ್‌ನಿಂದ ಲಂಡನ್‌ಗೆ ತಡೆ ರಹಿತ ವಿಮಾನ ಸೇವೆ ಕಲ್ಪಿಸಿರುವುದು ಅನುಕೂಲವಾಗಲಿದೆ. ಲಂಡನ್‌ನಲ್ಲಿ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳು ಹಾಗೂ ಮುಂಬರುವ ವರ್ಷಗಳಲ್ಲಿ ವ್ಯಾಪಾರದ ಅವಕಾಶಗಳನ್ನು ವಿಸ್ತರಿಸಲು ಈ ಸೇವೆ ಸಹಕಾರಿಯಾಗಿದೆ.

ಏರ್ ಇಂಡಿಯಾ ಆರಂಭಿಸಿರುವ ಈ ತಡೆರಹಿತ ಸೇವೆ ತೆಲಂಗಾಣ, ಆಂಧ್ರಪ್ರದೇಶ ಹಾಗೂ ನೆರೆಯ ರಾಜ್ಯಗಳ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುವ ವಿಶ್ವಾಸ ಇದೆ ಎಂದು ಜಿಎಂಆರ್‌ ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಇಒ ಪ್ರದೀಪ್ ಪಣಿಕರ್ ತಿಳಿಸಿದ್ದಾರೆ.

ಇದನ್ನೂ ಓದಿ:ಕಲಬುರಗಿಯಿಂದ ಮುಂಬೈಗೆ ವಿಮಾನ ಸೇವೆ ಆರಂಭ: ಜಲಫಿರಂಗಿ ಮೂಲಕ ಲೋಹದ ಹಕ್ಕಿಗೆ ಸ್ವಾಗತ

ABOUT THE AUTHOR

...view details