ಕಾನ್ಪುರ (ಉತ್ತರ ಪ್ರದೇಶ): ಕಾನ್ಪುರದ ಭಾರತೀಯ ವಾಯುಪಡೆಯ ಯೋಧ ಶುಕ್ರವಾರ ನಾಸಿಕ್‌ನ ವಾಯುಪಡೆಯ ನಿಲ್ದಾಣದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ವೀರೇಂದ್ರ ಪಾಲ್ ಎಂದು ಗುರುತಿಸಲಾಗಿದ್ದು, ಘಟಂಪುರ ಕೊತ್ವಾಲಿ ಪ್ರದೇಶದ ಫತೇಪುರ್ ಗ್ರಾಮದ ನಿವಾಸಿಯಾಗಿದ್ದಾರೆ.
ಮೃತ ಯೋಧನ ತಂದೆ ಶ್ರೀರಾಮ್ ಪಾಲ್ ಮಾತನಾಡಿ, ನನ್ನ 27 ವರ್ಷದ ಮಗ ವೀರೇಂದ್ರ ಪಾಲ್ ವಾಯುಪಡೆಯಲ್ಲಿ ಸೈನಿಕನಾಗಿದ್ದು, ಮಹಾರಾಷ್ಟ್ರದ ನಾಸಿಕ್ ಏರ್ ಫೋರ್ಸ್ ಸ್ಟೇಷನ್‌ನಲ್ಲಿರುವ ತಾಂತ್ರಿಕ ಆರ್ಮರಿಯಲ್ಲಿ ನಿಯೋಜಿತನಾಗಿದ್ದನು. ಆತನ ಸಾವಿನ ಬಗ್ಗೆ ನನ್ನ ಹಿರಿಯ ಮಗ ರಾಜುಗೆ ಕರೆ ಬಂದಿತ್ತು. ನಂತರ ನಮ್ಮ ಕುಟುಂಬ ಸದಸ್ಯರು ಮುಂಬೈನಲ್ಲಿ ನೌಕಾಪಡೆಯಲ್ಲಿದ್ದ ನಮ್ಮ ಸಂಬಂಧಿಕರಿಗೆ ಕರೆ ಮಾಡಿ ಘಟನೆಯ ಬಗ್ಗೆ ವಿಚಾರಿಸಿದರು ಎಂದು ಹೇಳಿದರು.