ಭುವನೇಶ್ವರ(ಓಡಿಶಾ): ಪ್ರಯಾಣಿಕರೊಬ್ಬರು ಅಸ್ವಸ್ಥರಾದ ಹಿನ್ನೆಲೆ ಏರ್ ಏಷ್ಯಾ ವಿಮಾನ ತುರ್ತು ಭೂಸ್ಪರ್ಶ ಮಾಡಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಈಗಾಗಲೇ ಆತ ಮೃತಪಟ್ಟಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಪಶ್ಚಿಮ ಬಂಗಾಳದ ಪುರ್ಬಾ ಮೆದ್ನಿಪುರ್ ನಿವಾಸಿ ತೈಮೂರ್ ಅಲಿ ಖಾನ್ (33) ಸಾವಿಗೀಡಾದವರು. ಅವರು ಅಸ್ವಸ್ಥಗೊಂಡ ನಂತರ ವಿಮಾನವನ್ನು ಭುವನೇಶ್ವರ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿತ್ತು.