ಕರ್ನಾಟಕ

karnataka

ETV Bharat / bharat

ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆ : ಬಿಟಿಪಿ ಜೊತೆ ಎಐಎಂಐಎಂ ಮೈತ್ರಿ

ನರೇಂದ್ರ ಮೋದಿ ಸರ್ಕಾರ ಬಡವರಿಗಾಗಿ ಏನನ್ನೂ ಮಾಡುತ್ತಿಲ್ಲ. ನಮ್ಮ ಹಕ್ಕುಗಳನ್ನು ಕಸಿಯುತ್ತಿರುವ ಈ ಸರ್ಕಾರದ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ಗುಜರಾತ್​ನಲ್ಲಿ ಎಐಎಂಐಎಂ ಜೊತೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಲಿದ್ದೇವೆ..

AIMIM joins hands with Bharatiya Tribal Party
AIMIM joins hands with Bharatiya Tribal Party

By

Published : Jan 3, 2021, 8:39 AM IST

ಗಾಂಧಿನಗರ: ಭಾರತೀಯ ಬುಡಕಟ್ಟು ಪಕ್ಷ (ಬಿಟಿಪಿ) ಮತ್ತು ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹಾದ್-ಉಲ್-ಮುಸ್ಲೀಮೀನ್ (ಎಐಎಂಐಎಂ) ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಗುಜರಾತ್‌ನಲ್ಲಿ ಒಟ್ಟಾಗಿ ಸ್ಪರ್ಧಿಸುವುದಾಗಿ ಘೋಷಿಸಿವೆ.

ಗುಜರಾತ್​ನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಎಂಐಎಂ ಪಕ್ಷವು ಭಾರತೀಯ ಬುಡಕಟ್ಟು ಪಕ್ಷ (ಬಿಟಿಪಿ) ಜೊತೆಗೆ ಮೈತ್ರಿ ಮಾಡಿಕೊಂಡಿದ್ದು ಈ ಕುರಿತು ಬಿಟಿಪಿ ನಾಯಕ ಛೋಟು ವಸವಾ ಅಧಿಕೃತ ಮಾಹಿತಿ ನೀಡಿದ್ದಾರೆ. ಎಐಎಂಐಎಂ ಸಂಸದ ಇಮ್ತಿಯಾಜ್ ಜಲೀಲ್, ಬಹ್ರೂಚ್ ಜಿಲ್ಲೆಯಲ್ಲಿರುವ ಬಿಟಿಪಿ ನಾಯಕರ ನಿವಾಸದಲ್ಲಿ ಸಭೆ ನಡೆಸಿದ್ದರು.

ಈ ವೇಳೆ ವಸವಾ ಅವರು ಎರಡು ಜಿಲ್ಲಾ ಪಂಚಾಯತ್​ಗಳಲ್ಲಿ (ನರ್ಮದಾ ಮತ್ತು ಬಹ್ರೂಚ್) ಕಾಂಗ್ರೆಸ್ ಜೊತೆಗಿನ ಮೈತ್ರಿ ಸಂಬಂಧವನ್ನು ತೊರೆಯುವುದಾಗಿ ಘೋಷಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಟಿಪಿ ಛೋಟು ವಸವಾ, ಅಸಾದುದ್ದೀನ್ ಓವೈಸಿ ಭಾರತೀಯ ಸಂವಿಧಾನಕ್ಕಾಗಿ ಹೋರಾಡುತ್ತಿರುವ ಜನರೊಟ್ಟಿಗೆ ಇದ್ದಾರೆ. ನರೇಂದ್ರ ಮೋದಿ ಸರ್ಕಾರ ಬಡವರಿಗಾಗಿ ಏನನ್ನೂ ಮಾಡುತ್ತಿಲ್ಲ. ನಮ್ಮ ಹಕ್ಕುಗಳನ್ನು ಕಸಿಯುತ್ತಿರುವ ಈ ಸರ್ಕಾರದ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ಗುಜರಾತ್​ನಲ್ಲಿ ಎಐಎಂಐಎಂ ಜೊತೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನು, ಅಹಮದಾಬಾದ್​ನ 55 ಪುರಸಭೆಗಳು, 31 ಜಿಲ್ಲಾ ಪಂಚಾಯತ್‌ಗಳು ಮತ್ತು 231 ತಾಲೂಕು ಪಂಚಾಯತ್‌ಗಳು ಸೇರಿ ಆರು ಮುನಿಸಿಪಲ್ ಕಾರ್ಪೊರೇಷನ್​ಗಳಿಗೆ 2019ರ ನವೆಂಬರ್‌ನಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ, ಐದು ವರ್ಷಗಳ ಅವಧಿ ಮುಗಿಯುವ ಒಂದು ತಿಂಗಳ ಮುನ್ನವೇ ಚುನಾವಣೆಯನ್ನು ಮೂರು ತಿಂಗಳು ಮುಂದೂಡಲಾಯಿತು. ನಂತರ ಮತ್ತೆ ಕೊರೊನಾ ವೈರಸ್ ಭೀತಿ ಹಿನ್ನೆಲೆ ​ಸ್ಥಳೀಯ ಸಂಸ್ಥೆ ಚುನಾವಣೆ ಮುಂದೂಡಲಾಯಿತು.

ABOUT THE AUTHOR

...view details