ಕರ್ನಾಟಕ

karnataka

ETV Bharat / bharat

ಎಐಎಂಐಎಂ ಬಿಜೆಪಿಯ ಬಿ ಟೀಂ ಎಂದ ಮಮತಾ ಬ್ಯಾನರ್ಜಿ - ಪಶ್ಚಿಮ ಬಂಗಾಳದಲ್ಲಿ ಅಸಾದುದ್ದೀನ್ ಓವೈಸಿ ಪಕ್ಷ

ಪಶ್ಚಿಮ ಬಂಗಾಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು ತಿಳಿಸಿದ್ದು, ಬಿಜೆಪಿಯ ಬಿ ತಂಡ ಒಂದು ಅಂಶವಾಗುವುದಿಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Mamata
ಮಮತಾ ಬ್ಯಾನರ್ಜಿ

By

Published : Jan 22, 2021, 9:36 AM IST

ಕೋಲ್ಕತಾ: ಬಿಹಾರ ಚುನಾವಣೆಯಲ್ಲಿ ಅಸಾದುದ್ದೀನ್ ಒವೈಸಿ ಅವರ ಎಐಎಂಐಎಂ ಪಕ್ಷವು ಸ್ಪರ್ಧಿಸಿ ಗೆಲುವು ಕಂಡಿದ್ದ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಸಿಎಂ ಮಮತಾ ಬ್ಯಾನರ್ಜಿ "ಬಿಜೆಪಿಯ ಬಿ ತಂಡ" ಒಂದು ಅಂಶವಾಗುವುದಿಲ್ಲ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದ ಅವರು, "ಮುರ್ಷಿದಾಬಾದ್ ಜಿಲ್ಲೆಯಲ್ಲಿ ಎಐಎಂಐಎಂ ಒಂದು ಅಂಶವಾಗುವುದಿಲ್ಲ. ಬಿಹಾರ ಚುನಾವಣೆಯ ನಂತರ ಒವೈಸಿ ಪಕ್ಷದ ಇರುವಿಕೆ ಎಷ್ಟು ಎಂಬುದು ಗೊತ್ತಾಗಿದೆ" ಎಂದರು.

ಮುರ್ಷಿದಾಬಾದ್ ಜಿಲ್ಲೆಯು 22 ವಿಧಾನಸಭಾ ಸ್ಥಾನಗಳನ್ನು ಒಳಗೊಂಡಿದೆ. ಬಿಹಾರದಲ್ಲಿ ಮುಸ್ಲಿಮರ ಪ್ರಾಬಲ್ಯದ ಸೀಮಾಂಚಲ್ ಪ್ರದೇಶದಲ್ಲಿ ಎಐಎಂಐಎಂ ಐದು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ತಿಂಗಳ ಆರಂಭದಲ್ಲಿ, ಓವೈಸಿ ಅವರು ಹೂಗ್ಲಿ ಜಿಲ್ಲೆಯ ಫರ್ಫುರಾ ಷರೀಫ್‌ನ ಪಿರ್ಜಾಡಾ ಅಬ್ಬಾಸ್ ಸಿದ್ದಿಕಿ ಅವರನ್ನು ಭೇಟಿ ಮಾಡಿ ಸೀಟು ಹಂಚಿಕೆ ವ್ಯವಸ್ಥೆ ಕುರಿತು ಚರ್ಚಿಸಿದ್ದರು. ಪಶ್ಚಿಮ ಬಂಗಾಳದ ಮುಂಬರುವ ವಿಧಾನಸಭಾ ಚುನಾವಣೆಯ ವಿರುದ್ಧ ಹೋರಾಡುವ ಇಚ್ಛೆಯನ್ನು ಎಐಎಂಐಎಂ ಮುಖ್ಯಸ್ಥರು ಈಗಾಗಲೇ ವ್ಯಕ್ತಪಡಿಸಿದ್ದಾರೆ.

"ರಾಜ್ಯದಲ್ಲಿ ಮುಸ್ಲಿಂ ಮತಗಳನ್ನು ವಿಭಜಿಸುವ ಮತ್ತು ಬಿಜೆಪಿಗೆ ಸಹಾಯ ಮಾಡುವ ಪ್ರಯತ್ನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಐಎಂಐಎಂ ಪ್ರವೇಶಿಸಿದೆ" ಎಂದು ಟಿಎಂಸಿ ಆರೋಪಿಸಿದೆ.

ABOUT THE AUTHOR

...view details