ನವದೆಹಲಿ:ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಎಲ್ಲ ಧರ್ಮಕ್ಕೂ ಅನ್ವಯಿಸುವ ಸಮಗ್ರ ನೀತಿಯನ್ನು ಜಾರಿಗೆ ತರಲು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಲಹೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ, ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿಲ್ಲ. ಕಾರಣ ನಾವು ಹೆಚ್ಚು ಕಾಂಡೋಮ್ ಬಳಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
ಮೋಹನ್ ಭಾಗವತ್ರ ಜನಸಂಖ್ಯಾ ನಿಯಂತ್ರಣಕ್ಕಾಗಿ ಸಮಗ್ರ ನೀತಿ ಜಾರಿ ಮಾಡುವ ಸಲಹೆಯನ್ನು ವಿರೋಧಿಸಿದ್ದ ಓವೈಸಿ, ದೇಶಕ್ಕೆ ಅದರ ಅಗತ್ಯವಿಲ್ಲ ಎಂದು ಹೇಳಿದ್ದರು. ಇದೀಗ ಮತ್ತೊಂದು ಸಮರ್ಥನೆ ನೀಡಿದ್ದು, ಮೋಹನ್ ಭಾಗವತ್ ಅವರೇ ಚಿಂತಿಸಬೇಡಿ. ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತಿಲ್ಲ. ಇದಕ್ಕೆ ಕಾರಣವಿದೆ. ದೇಶದಲ್ಲಿ ಅತೀ ಹೆಚ್ಚು ಕಾಂಡೋಮ್ ಬಳಕೆಯಾಗುತ್ತಿವೆ. ಅವುಗಳನ್ನು ಬಳಸುತ್ತಿರುವುದೇ ಮುಸ್ಲಿಮರು. ಹೀಗಾಗಿ ನಮ್ಮ ಸಂಖ್ಯೆ ಬೆಳೆಯುತ್ತಿಲ್ಲ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದಾರೆ.
ಮುಂದುವರಿದು, ನಾವು ಕಾಂಡೋಮ್ ಬಳಸುತ್ತಿರುವುದರಿಂದ ಸಂತಾನೋತ್ಪತ್ತಿ ಕಡಿಮೆ ಆಗಿದೆ. ಹೀಗಾಗಿ ಭಾಗವತ್ರ ಸಲಹೆ ಗೆದ್ದಿದೆ. ಮುಸ್ಲಿಂ ಜನಸಂಖ್ಯೆ ಹೆಚ್ಚುವ ಬದಲಾಗಿ ಕುಗ್ಗುತ್ತಿದೆ. ಈ ಬಗ್ಗೆ ಮಾತ್ರ ಮೋಹನ್ ಭಾಗವತ್ ಅವರು ಮಾತನಾಡುವುದಿಲ್ಲ ಎಂದರು.