ಕರ್ನಾಟಕ

karnataka

ETV Bharat / bharat

2025ರ ವೇಳೆಗೆ ಭಾರತವನ್ನ ಕ್ಷಯರೋಗ ಮುಕ್ತ ಮಾಡುತ್ತೇವೆ: ಪ್ರಧಾನಿ ಮೋದಿ ಅಭಯ - ಕೊರೊನಾ ಬಗ್ಗೆ ಮೋದಿ ಪ್ರತಿಕ್ರಿಯೆ

2025ರ ವೇಳೆಗೆ ದೇಶದಿಂದ ಕ್ಷಯರೋಗ ತೊಡೆದುಹಾಕುವ ಗುರಿ ಹೊಂದಿದ್ದೇವೆ. ಮಾಸ್ಕ್​ ಧರಿಸುವುದು, ಆರಂಭಿಕ ಹಂತದಲ್ಲಿ ರೋಗನಿರ್ಣಯ ಮತ್ತು ಚಿಕಿತ್ಸೆಯು ರೋಗ ತಡೆಗಟ್ಟುವಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

PM Modi
PM Modi

By

Published : Feb 23, 2021, 3:14 PM IST

ನವದೆಹಲಿ: 2025ರ ವೇಳೆಗೆ ದೇಶದಿಂದ ಕ್ಷಯರೋಗ (ಟಿಬಿ) ನಿರ್ಮೂಲನೆ ಮಾಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಕೇಂದ್ರವು ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಮಾಡುವುದಲ್ಲದೇ ಉದ್ಯೋಗಾವಕಾಶ ತರುವತ್ತ ಗಮನ ಹರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಆರೋಗ್ಯ ಕ್ಷೇತ್ರದ ಬಜೆಟ್ ಅನುಷ್ಠಾನದ ಕುರಿತು ವೆಬಿನಾರ್​​ ಉದ್ದೇಶಿಸಿ ಮಾತನಾಡಿದ ಮೋದಿ, ನಾವು 2025ರ ವೇಳೆಗೆ ದೇಶದಿಂದ ಕ್ಷಯರೋಗ ತೊಡೆದುಹಾಕುವ ಗುರಿ ಹೊಂದಿದ್ದೇವೆ. ಮಾಸ್ಕ್​ ಧರಿಸುವುದು, ಆರಂಭಿಕ ಹಂತದಲ್ಲಿ ರೋಗನಿರ್ಣಯ ಮತ್ತು ಚಿಕಿತ್ಸೆಯು ರೋಗ ತಡೆಗಟ್ಟುವಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಕಳೆದ ವರ್ಷ ಜೂನ್‌ನಲ್ಲಿ ಬಿಡುಗಡೆಯಾದ ವಾರ್ಷಿಕ ಟಿಬಿ ವರದಿ 2020ರಲ್ಲಿ 2019ರ ಅವಧಿಯಲ್ಲಿ ಸುಮಾರು 24.04 ಲಕ್ಷ ಟಿಬಿ ರೋಗಿಗಳಿಗೆ ಸೂಚನೆ ನೀಡಲಾಗಿತ್ತು. 2018ಕ್ಕೆ ಹೋಲಿಸಿದರೆ ಇದು ಶೇ 14ರಷ್ಟು ಹೆಚ್ಚಳವಾಗಿದೆ.

ಕೇಂದ್ರವು ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಮಾಡುವುದು ಮಾತ್ರವಲ್ಲ, ಅಂತಹ ಸೌಲಭ್ಯಗಳನ್ನು ದೂರದ ಪ್ರದೇಶಗಳಲ್ಲಿಯೂ ಲಭ್ಯವಾಗುವಂತೆ ನೋಡಿಕೊಳ್ಳುತ್ತಿದೆ. ಆರೋಗ್ಯ ರಕ್ಷಣೆಯಲ್ಲಿನ ಹೂಡಿಕೆಯು ಉದ್ಯೋಗಾವಕಾಶಗಳನ್ನು ತರುವತ್ತ ಗಮನಹರಿಸುತ್ತದೆ ಎಂದರು.

ಇದನ್ನೂ ಓದಿ: ಭಾರತದಲ್ಲಿ ತ್ವರಿತ 5ಜಿ ಸೇವೆಗೆ ಏರ್​ಟೆಲ್ ​​- ಕ್ವಾಲ್ಕಾಮ್​ ಜಂಟಿ ಸಹಭಾಗಿತ್ವ

ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಲ್ಲಿನ (ಪಿಎಂಜೆಎವೈ) ಪಾಲಿನೊಂದಿಗೆ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳ ಜಾಲ ರಚಿಸುವಲ್ಲಿ ಖಾಸಗಿ ವಲಯವು ಪಿಪಿಪಿ ಮಾದರಿಗಳನ್ನು ಬೆಂಬಲಿಸುತ್ತದೆ. ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್, ನಾಗರಿಕರ ಡಿಜಿಟಲ್ ಆರೋಗ್ಯ ದಾಖಲೆಗಳು ಮತ್ತು ಇತರವುಗಳ ಸಹಭಾಗಿತ್ವವೂ ಇರಬಹುದು ಎಂದು ಹೇಳಿದರು.

ಈ ವರ್ಷದ ಆರೋಗ್ಯ ಬಜೆಟ್ ಅಸಾಧಾರಣ ಎಂದ ಪ್ರಧಾನಿ, ಕಳೆದ ವರ್ಷ ಭಾರತ ಮತ್ತು ಅದರ ಆರೋಗ್ಯ ಕ್ಷೇತ್ರಕ್ಕೆ ಸವಾಲೊಡ್ಡಿದ ಕೋವಿಡ್​-19 ಸಾಂಕ್ರಾಮಿಕದಿಂದ ದೇಶವು ಹಲವು ಸವಾಲು ಯಶಸ್ವಿಯಾಗಿ ಜಯಿಸಿತು ಎಂದರು.

ಆರೋಗ್ಯ ಕ್ಷೇತ್ರಕ್ಕೆ ಈಗ ನಿಗದಿಪಡಿಸಿದ ಬಜೆಟ್ ಅಸಾಧಾರಣವಾಗಿದೆ. ಇದು ಈ ವಲಯದ ಬಗೆಗಿನ ನಮ್ಮ ಬದ್ಧತೆ ತೋರಿಸುತ್ತದೆ. ಕೋವಿಡ್​-19 ಸಾಂಕ್ರಾಮಿಕವು ಭವಿಷ್ಯದಲ್ಲಿ ಇದೇ ರೀತಿಯ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರುವ ಪಾಠವನ್ನು ನಮಗೆ ಕಲಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಕಳೆದ ವರ್ಷ ಭಾರತ, ವಿಶ್ವ ಮತ್ತು ಇಡೀ ಮಾನವೀಯತೆಗೆ ಬೆಂಕಿಯಂತಹ ಪ್ರಯೋಗವಾಗಿತ್ತು. ದೇಶದ ಆರೋಗ್ಯ ಕ್ಷೇತ್ರವು ಈ ಸವಾಲನ್ನು ಯಶಸ್ವಿಯಾಗಿ ಜಯಿಸಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ. ನಾವು ಹಲವರ ಜೀವಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

ABOUT THE AUTHOR

...view details