ನವದೆಹಲಿ : ರಾಜಧಾನಿ ದಿಲ್ಲಿಯ ಅತಿ ದೊಡ್ಡ ಆಸ್ಪತ್ರೆಯಾಗಿರುವ ಏಮ್ಸ್‌ನ ವೈದ್ಯಕೀಯ ವಿದ್ಯಾರ್ಥಿ ಅಭಿಷೇಕ್ ಮಾಳವಿಯಾ ಎಂಬುವವರು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಅಭಿಷೇಕ್ನ ಸಾವಿನ ನಂತರ ಸಹಪಾಠಿಗಳು ಏಮ್ಸ್ ಆಡಳಿತದ ನಿರ್ಲಕ್ಷ್ಯ ಸಾವು ಸಂಭವಿಸಿದೆ ಎಂದು ಆರೋಪಿಸಿ ಹೋರಾಟ ಮಾಡಿದ್ದಾರೆ.
ಅಭಿಷೇಕ್ ಸಾವಿನ ನಂತರ, ವೈದ್ಯಕೀಯ ವಿದ್ಯಾರ್ಥಿಗಳು ಏಮ್ಸ್ ನಿರ್ದೇಶಕರ ಕಚೇರಿಯ ಎದುರು ಗಲಾಟೆ ಮಾಡಿದರು ಮತ್ತು ಏಮ್ಸ್ ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು. ಹಾಸ್ಟೆಲ್ ನೀಡುವಂತೆ ಎಐಐಎಂಎಸ್ ಆಡಳಿತಕ್ಕೆ ಹಲವು ಬಾರಿ ಲಿಖಿತವಾಗಿ ಮನವಿ ಮಾಡಿದ್ದೆವು, ಆದರೆ ನಮಗೆ ಹಾಸ್ಟೆಲ್ ನೀಡಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದರು.
ಏಮ್ಸ್‌ನ ವೈದ್ಯಕೀಯ ವಿದ್ಯಾರ್ಥಿ ಸಾವು ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದ್ದರೆ ಅಭಿಷೇಕ್ ಪ್ರಾಣ ಉಳಿಸಬಹುದಿತ್ತು. ಅಭಿಷೇಕ್ ಆಡಳಿತ ಮಂಡಳಿ ಹಾಸ್ಟೆಲ್ ವ್ಯವಸ್ಥೆ ಮಾಡಿಕೊಟ್ಟಿರದಿದ್ದದೇ ಆತನ ಸಾವಿಗೆ ಕಾರಣ. ಆತನಿಗೆ ತೀವ್ರ ಅನಾರೋಗ್ಯ ಕಾಡಿತ್ತು. ಹೀಗಾಗಿ ಆತ ಹೊರಗಡೆ ಇರುತ್ತಿದ್ದ. ಅವನು ಹಾಸ್ಟೆಲ್ನಲ್ಲಿದ್ದಿದ್ದರೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಬಹುದಿತ್ತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಮೃತ ವಿದ್ಯಾರ್ಥಿಯ ತಂದೆ 'ತನ್ನ ಮಗನನ್ನು ಇಲ್ಲಿ ಓದಿಸಲು ಕಳುಹಿಸಿದ್ದೆ. ಆದರೆ ಇಲ್ಲೇ ಸಾವನ್ನಪ್ಪಿದ್ದಾನೆ' ಎಂದು ದುಃಖತಪ್ತರಾದರು.
ಇದನ್ನೂ ಓದಿ :EXCLUSIVE: ಸಿಯುಇಟಿ ನಲ್ಲಿ ನೀಟ್ ಮತ್ತು ಜೆಇಇ ವಿಲೀನ.. ಯುಜಿಸಿ ಅಧ್ಯಕ್ಷರ ಸಂದರ್ಶನ