ನವದೆಹಲಿ:ಹನುಮಾನ್ ಚಾಲೀಸ್ ಪಠಣದಿಂದ ಕಷ್ಟಗಳು ದೂರ ಆಗುತ್ತವೆ ಎಂಬುದು ಅನೇಕರ ನಂಬಿಕೆ. ದೆಹಲಿಯ ಏಮ್ಸ್ನಲ್ಲಿ ನಡೆದಿರುವ ಘಟನೆ ಇದಕ್ಕೊಂದು ಉದಾಹರಣೆಯಾಗಿದೆ.
ಹನುಮಾನ್ ಚಾಲೀಸ್ ಪಠಣ ಮಾಡುತ್ತ ಮೆದುಳಿನ ಶಸ್ತ್ರಚಿಕಿತ್ಸೆಗೊಳಗಾದ ಶಿಕ್ಷಕಿ! ದೇಶದ ಅತಿದೊಡ್ಡ ಆಸ್ಪತ್ರೆಯಾಗಿರುವ ದೆಹಲಿ ಏಮ್ಸ್ನಲ್ಲಿ 25 ವರ್ಷದ ಮಹಿಳಾ ಶಿಕ್ಷಕಿಯೊಬ್ಬರಿಗೆ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪ್ರಜ್ಞೆ ತಪ್ಪಿಸದೇ ವೈದ್ಯರು ಸರ್ಜರಿ ಮಾಡುತ್ತಿದ್ದಾಗ ಮಹಿಳೆ ಹನುಮಾನ್ ಚಾಲೀಸ ಪಠಣ ಮಾಡುತ್ತಿದ್ದರು. ಆಪರೇಷನ್ ಮುಗಿದ ತಕ್ಷಣವೇ ತನಗೆ ಏನೂ ಆಗಿಲ್ಲ ಎಂಬ ರೀತಿಯಲ್ಲಿ ನಡೆದುಕೊಂಡಿದ್ದಾರೆ.
ಏಮ್ಸ್ನ ನ್ಯೂರೋ ಸರ್ಜರಿ ವಿಭಾಗದ ವೈದ್ಯರು 25 ವರ್ಷದ ಮಹಿಳಾ ಶಿಕ್ಷಕಿಗೆ ಮೆದುಳಿನ ಗಡ್ಡೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಇದನ್ನೂ ಓದಿರಿ: ಒಲಿಂಪಿಕ್ಸ್ ಉದ್ಘಾಟನೆ ವೇಳೆ ಪಾಕ್ ಕ್ರೀಡಾಳುಗಳಿಂದ ಕೋವಿಡ್ ನಿಯಮ ಉಲ್ಲಂಘನೆ
ಕಳೆದ ಕೆಲ ವರ್ಷಗಳಿಂದ ಶಿಕ್ಷಕಿ ತಲೆನೋವಿನಿಂದ ಬಳಲುತ್ತಿದ್ದರು. ಪರೀಕ್ಷೆಗೊಳಪಡಿಸಿದಾಗ ಮೆದುಳಿನಲ್ಲಿ ಗಡ್ಡೆ ಬೆಳೆದಿರುವುದು ಗೊತ್ತಾಗಿದೆ. ಆಕೆಗೆ ಶಸ್ತ್ರಚಿಕಿತ್ಸೆ ನಡೆಸಲು ಮುಂದಾದಾಗ ಹನುಮಾನ್ ಚಾಲೀಸ್ ಓದಿದ್ದು, ಇದರ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಆಪರೇಷನ್ ನಡೆದ ತಕ್ಷಣವೇ ಅವರು ಆಪರೇಷನ್ ಥಿಯೇಟರ್ನಿಂದ ಹೊರಬಂದಿರುವುದು ಅಚ್ಚರಿ ಮೂಡಿಸಿದೆ.