ನವದೆಹಲಿ: ಇಲ್ಲಿನ ಅಮನ್ ಎಂಬ ಬಾಲಕ ಬ್ಲೂ ಬೇಬಿ ಸಿಂಡ್ರೋಮ್ನೊಂದಿಗೆ ಜನಿಸಿದ್ದ. ಸಾಮಾನ್ಯ ಮಗುವಿನಂತೆ ಜನಿಸದ ಕಾರಣ ಸಾಕಷ್ಟು ಕಷ್ಟಪಟ್ಟಿದ್ದ. ಅವನ ಹೃದಯದಲ್ಲಿ ಜನ್ಮಜಾತ ದೋಷವಿದ್ದು, ಹೃದಯವು ಆಮ್ಲಜನಕಯುಕ್ತ ರಕ್ತವನ್ನು ಪ್ರತ್ಯೇಕಿಸಲು ಸಾಧ್ಯವಾಗುತ್ತಿರಲಿಲ್ಲ.
ಅಂದರೆ ಶುದ್ಧ ರಕ್ತ ಮತ್ತು ಡೀ ಆಕ್ಸಿಜೆನೇಟೆಡ್ ರಕ್ತ ಅಂದರೆ ಅಶುದ್ಧ ರಕ್ತ ಎರಡೂ ಒಂದೇ ಸ್ಥಳದಲ್ಲಿ ಸೇರುತ್ತಿತ್ತು. ಇದರ ಪರಿಣಾಮವಾಗಿ ದೇಹದ ಪ್ರಮುಖ ಅಂಗಗಳಿಗೆ ಅಗತ್ಯವಾದ ಆಮ್ಲಜನಕದ ಪೂರೈಕೆ ಸಾಧ್ಯವಾಗುತ್ತಿರಲಿಲ್ಲ. ಅಂತಹ ಪರಿಸ್ಥಿತಿಯಿಂದ ಹೊರಬರಲು ಇದ್ದ ಏಕೈಕ ಮಾರ್ಗವೆಂದರೆ ದೋಷಪೂರಿತ ಹೃದಯವನ್ನು ಬದಲಾಯಿಸುವುದು.