ಕರ್ನಾಟಕ

karnataka

ETV Bharat / bharat

ತಮಿಳುನಾಡು ವಿಧಾನ ಕದನ​: ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ​ ಮಾಡಿದ ಎಐಎಡಿಎಂಕೆ - ತಮಿಳುನಾಡು ವಿಧಾನಸಭೆಗೆ ಚುನಾವಣೆ

ತಮಿಳುನಾಡು ವಿಧಾನಸಭೆಗೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಇದೀಗ ಆಡಳಿತಾರೂಢ ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಿದೆ.

AIADMK
AIADMK

By

Published : Mar 5, 2021, 3:15 PM IST

ಚೆನ್ನೈ:ತಮಿಳುನಾಡು ವಿಧಾನಸಭೆ ಚುನಾವಣೆಗೆ ಈಗಾಗಲೇ ಮುಹೂರ್ತ ಫಿಕ್ಸ್​ ಆಗಿದೆ. ರಾಜ್ಯದ 234 ವಿಧಾನಸಭೆ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಏಪ್ರಿಲ್​ 6ರಂದು ಚುನಾವಣೆ ನಡೆಯಲಿದೆ. ಅದಕ್ಕಾಗಿ ಎಐಎಡಿಎಂಕೆ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದೆ.

ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಎಡಪ್ಪಾಡಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದು, ಉಪ ಮುಖ್ಯಮಂತ್ರಿ ಪನ್ನಿರ್​ಸೆಲ್ವಂ ಬೋಡಿನಾಯಕನೂರ್​ ಕ್ಷೇತ್ರದಿಂದ ಚುನಾವಣೆ ಎದುರಿಸಲಿದ್ದಾರೆ.

ಮೊದಲ ಪಟ್ಟಿಯಲ್ಲಿ ಆರು ಅಭ್ಯರ್ಥಿಗಳ ಸ್ಪರ್ಧೆ ಬಗ್ಗೆ ಮಾಹಿತಿ ನೀಡಿದ್ದು, ಪಕ್ಷದ ಹಿರಿಯ ಅಭ್ಯರ್ಥಿಗಳಾದ ಡಿ.ಜಯಕುಮಾರ್ (ಮೀನುಗಾರಿಕೆ ಸಚಿವ) ಮತ್ತು ಸಿ.ವೈ ಷಣ್ಮುಗಂ (ಕಾನೂನು ಸಚಿವ) ಅವರು ರಾಯಪುರಂ ಮತ್ತು ಉತ್ತರ ತಮಿಳುನಾಡಿನ ವಿಲ್ಲುಪುರಂನಿಂದ ಕಣಕ್ಕಿಳಿಸಲಾಗಿದೆ.

ಇದನ್ನೂ ಓದಿ: ನಂದಿಗ್ರಾಮದಿಂದ ಮಾತ್ರ ಕಣಕ್ಕಿಳಿದ ಮಮತಾ; ಬಿಜೆಪಿ ವಿರುದ್ಧ ದೀದಿಯ ರಣಕಹಳೆ

ಉಳಿದಂತೆ ಶಾಸಕರಾದ ಎಸ್​.ಪಿ ಷಣ್ಮುಗನಾಥನ್​​ ಮತ್ತು ಎಸ್​.ತೆನ್ಮೋಜಿ ಶ್ರೀವೈಗುಂಡಂ ಹಾಗೂ ನೀಲಕೋಟೈ ಕ್ಷೇತ್ರಗಳಿಂದ ಈ ಸಲದ ಚುನಾವಣೆ ಎದುರಿಸಲಿದ್ದಾರೆ. ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಎಐಎಡಿಎಂಕೆ ಹಾಗೂ ಭಾರತೀಯ ಜನತಾ ಪಾರ್ಟಿ ಮೈತ್ರಿ ಮಾಡಿಕೊಂಡಿವೆ.

ABOUT THE AUTHOR

...view details