ಕರ್ನಾಟಕ

karnataka

By

Published : Dec 21, 2022, 6:22 PM IST

Updated : Dec 21, 2022, 6:39 PM IST

ETV Bharat / bharat

ಹೃದಯ ಕಾಯಿಲೆ ಪತ್ತೆಗೆ ಕೃತಕ ಬುದ್ಧಿಮತ್ತೆಯ ಡಿಜಿಟಲ್ ಮಾರ್ಕರ್ ಯಂತ್ರ

ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಗಳ ಪ್ರಕಾರ, ಹೆಚ್ಚು ನಿಖರವಾದ ರೋಗನಿರ್ಣಯ ಮತ್ತು ಸಿಎಡಿ ರೋಗವನ್ನು ಉತ್ತಮವಾಗಿ ನಿರ್ವಹಿಸುವುದಕ್ಕೆ ಅನುಕೂಲವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಸಿಎಡಿ ಇದು ಹೃದಯ ಕಾಯಿಲೆಯ ಅತ್ಯಂತ ಸಾಮಾನ್ಯ ವಿಧವಾಗಿದ್ದು, ವಿಶ್ವದಾದ್ಯಂತ ಸಂಭವಿಸುವ ಹೆಚ್ಚಿನ ಸಾವುಗಳಿಗೆ ಪ್ರಮುಖ ಕಾರಣವಾಗಿದೆ ಎಂದು ಅಧ್ಯಯನವು ಹೇಳಿದೆ.

ಹೃದಯ ಕಾಯಿಲೆ ಪತ್ತೆಗೆ ಕೃತಕ ಬುದ್ಧಿಮತ್ತೆಯ ಡಿಜಿಟಲ್ ಮಾರ್ಕರ್ ಯಂತ್ರ
ai-derived-digital-marker-to-measure-characteristics-of-heart-disease-in-patients-study

ವಾಶಿಂಗ್ಟನ್: ಪರಿಧಮನಿಯ ಕಾಯಿಲೆ (ಸಿಎಡಿ) ರೋಗದ ಪ್ರಮುಖ ಗುಣಲಕ್ಷಣಗಳನ್ನು ಪ್ರಾಯೋಗಿಕವಾಗಿ ಉತ್ತಮವಾಗಿ ಅಳೆಯಲು ವಿಜ್ಞಾನಿಗಳು ಇನ್ ಸಿಲಿಕೋ ಅಥವಾ ಕಂಪ್ಯೂಟರ್ ಆಧರಿತ ಮಾರ್ಕರ್ ಅನ್ನು ನಿರ್ಮಿಸಿದ್ದಾರೆ. ನ್ಯೂಯಾರ್ಕ್‌ನ ಮೌಂಟ್ ಸಿನಾಯ್‌ನಲ್ಲಿರುವ ಇಕಾನ್ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರು ಎಲೆಕ್ಟ್ರಾನಿಕ್ ಹೆಲ್ತ್ ರೆಕಾರ್ಡ್‌ಗಳಿಂದ ಮೆಷಿನ್ ಲರ್ನಿಂಗ್ ಮತ್ತು ಕ್ಲಿನಿಕಲ್ ಡೇಟಾ ಬಳಸಿಕೊಂಡು ಸ್ಪೆಕ್ಟ್ರಮ್‌ನಲ್ಲಿ ಸಿಎಡಿ ಗುಣಲಕ್ಷಣಗಳನ್ನು ಮ್ಯಾಪ್ ಮಾಡಿದ ಮೊದಲಿಗರಾಗಿದ್ದಾರೆ. ಹಿಂದಿನ ಅಧ್ಯಯನಗಳು ರೋಗಿಗೆ ಸಿಎಡಿ ಇದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿದ್ದವು ಎಂದು ಅಧ್ಯಯನ ಹೇಳಿದೆ.

ಸಿಎಡಿ ಮತ್ತು ಇತರ ಸಾಮಾನ್ಯ ರೋಗದ ಪರಿಸ್ಥಿತಿಗಳು ಹಲವಾರು ರೋಗಗಳ ಸಂದರ್ಭದಲ್ಲಿ ಅಸ್ತಿತ್ವದಲ್ಲಿವೆ; ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯಕ್ಕೆ ಎದುರಾಗುವ ಅಪಾಯಕಾರಿ ಅಂಶಗಳು ಮತ್ತು ರೋಗ ಪ್ರಕ್ರಿಯೆಗಳ ಮಿಶ್ರಣವು ಅವರು ರೋಗದ ಯಾವ ಹಂತದಲ್ಲಿದ್ದಾರೆ ಎಂಬುದನ್ನು ನಿರ್ಧರಿಸುತ್ತದೆ. ಆದಾಗ್ಯೂ, ಅಂಥ ಹೆಚ್ಚಿನ ಅಧ್ಯಯನಗಳು ಈ ರೋಗದ ಹಂತವನ್ನು ಕಟ್ಟುನಿಟ್ಟಾದ ವರ್ಗಗಳ ಪ್ರಕರಣಗಳಾಗಿ (ರೋಗಿಗೆ ಕಾಯಿಲೆಯಿದೆ) ಅಥವಾ ನಿಯಂತ್ರಣದಲ್ಲಿದೆ (ರೋಗಿಗೆ ರೋಗವಿಲ್ಲ) ಎಂದು ಎರಡು ವಿಭಾಗಗಳಾಗಿ ಪ್ರತ್ಯೇಕಿಸುತ್ತವೆ.

ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಗಳ ಪ್ರಕಾರ, ಹೆಚ್ಚು ನಿಖರವಾದ ರೋಗನಿರ್ಣಯ ಮತ್ತು ಸಿಎಡಿ ರೋಗವನ್ನು ಉತ್ತಮವಾಗಿ ನಿರ್ವಹಿಸುವುದಕ್ಕೆ ಅನುಕೂಲವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಸಿಎಡಿ ಇದು ಹೃದಯ ಕಾಯಿಲೆಯ ಅತ್ಯಂತ ಸಾಮಾನ್ಯ ವಿಧವಾಗಿದ್ದು, ವಿಶ್ವದಾದ್ಯಂತ ಸಂಭವಿಸುವ ಹೆಚ್ಚಿನ ಸಾವುಗಳಿಗೆ ಪ್ರಮುಖ ಕಾರಣವಾಗಿದೆ ಎಂದು ಅಧ್ಯಯನವು ಹೇಳಿದೆ.

ನಮ್ಮ ಮಾದರಿಯು ಪರಿಧಮನಿಯ ಕಾಯಿಲೆಯ ರೋಗಿಗಳ ಜನಸಂಖ್ಯೆಯನ್ನು ರೋಗದ ಹಂತಗಳ ರೀತಿಯಲ್ಲಿ ವಿವರಿಸುತ್ತದೆ; ಇದು ರೋಗ ಎಷ್ಟು ಹೆಚ್ಚಾಗಿದೆ ಎಂಬ ಬಗ್ಗೆ ಮತ್ತು ರೋಗಿಗಳು ಚಿಕಿತ್ಸೆಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಬಗ್ಗೆ ಹೆಚ್ಚಿನ ಒಳನೋಟಗಳನ್ನು ನೀಡುತ್ತದೆ.

ಅಧ್ಯಯನದ ಪ್ರಕಾರ, ಸಂಶೋಧಕರು ಡಿಜಿಟಲ್ ಮಾರ್ಕರ್ ಎಂದು ಕರೆಯಲಾಗುವ ಮಾದರಿಯು ಪ್ರಮುಖ ಚಿಹ್ನೆಗಳು, ಪ್ರಯೋಗಾಲಯ ಪರೀಕ್ಷೆಯ ಫಲಿತಾಂಶಗಳು, ಔಷಧಿಗಳು, ರೋಗಲಕ್ಷಣಗಳು ಮತ್ತು ರೋಗನಿರ್ಣಯಗಳನ್ನು ಒಳಗೊಂಡಂತೆ ಎಲೆಕ್ಟ್ರಾನಿಕ್ ಆರೋಗ್ಯ ದಾಖಲೆಯಿಂದ ನೂರಾರು ವಿಭಿನ್ನ ಕ್ಲಿನಿಕಲ್ ವೈಶಿಷ್ಟ್ಯಗಳನ್ನು ಸಂಯೋಜಿಸಿದೆ ಮತ್ತು ಎರಡನ್ನೂ ಹೋಲಿಸಿದೆ.

ಸಂಶೋಧನೆಯಲ್ಲಿ ಭಾಗವಹಿಸಿದ್ದ 95,935 ಜನರಲ್ಲಿ ಆಫ್ರಿಕನ್, ಹಿಸ್ಪಾನಿಕ್/ಲ್ಯಾಟಿನೋ, ಏಷ್ಯನ್ ಮತ್ತು ಯುರೋಪಿಯನ್ ಜನಾಂಗಗಳ ಸೇರಿದ್ದಾರೆ ಮತ್ತು ಇದರಲ್ಲಿ ಮಹಿಳೆಯರ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಸಿಎಡಿ ಕುರಿತಾದ ಹೆಚ್ಚಿನ ಕ್ಲಿನಿಕಲ್ ಮತ್ತು ಮೆಶಿನ್ ಲರ್ನಿಂಗ್ ಅಧ್ಯಯನಗಳು ಬಿಳಿ ಯುರೋಪಿಯನ್ ಜನಾಂಗೀಯ ಸಮುದಾಯದ ಮೇಲೆ ಕೇಂದ್ರೀಕರಿಸಿದೆ ಎಂದು ಅಧ್ಯಯನವು ಹೇಳಿದೆ. ಮಾದರಿಗಳು ಪರಿಧಮನಿಯ ಅಪಧಮನಿಗಳ ಕಿರಿದಾಗುವಿಕೆ (ಪರಿಧಮನಿಯ ಸ್ಟೆನೋಸಿಸ್)ಯ ಸಂಭವನೀಯತೆಗಳು, ಮರಣ ಮತ್ತು ಹೃದಯಾಘಾತದಂತಹ ತೊಡಕುಗಳ ಮಟ್ಟವನ್ನು ನಿಖರವಾಗಿ ಪತ್ತೆಹಚ್ಚುತ್ತವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ ಎಂದು ಅಧ್ಯಯನವು ಹೇಳಿದೆ.

ಇದನ್ನೂ ಓದಿ: ವಾಯು ಮಾಲಿನ್ಯದಿಂದ ಗಂಭೀರ ಹೃದಯ ಕಾಯಿಲೆಗಳ ಅಪಾಯ ಹಚ್ಚಳ

Last Updated : Dec 21, 2022, 6:39 PM IST

ABOUT THE AUTHOR

...view details