ಅಹಮದಾಬಾದ್: ಇಲ್ಲಿನ ಖಾಮಾಸಾದಲ್ಲಿರುವ 150 ವರ್ಷಗಳಷ್ಟು ಹಳೆಯದಾದ ಪಾರಂಪರಿಕ ಕಟ್ಟಡವನ್ನು ಮರು ವಿನ್ಯಾಸಗೊಳಿಸಿ, ಹಿಂದುಳಿದ ಬಾಲಕಿಯರಿಗಾಗಿ ಇನೋವೇಶನ್ ಸೆಂಟರ್ ತೆರೆಯಲು ಯೋಜನೆ ರೂಪಿಸಲಾಗಿದೆ. 2001ರಲ್ಲಿ ಸಂಭವಿಸಿದ ಭೂಕಂಪದ ಸಂದರ್ಭದಲ್ಲಿ ಈ ಕಟ್ಟಡವು ಭಾರಿ ಹಾನಿಗೊಳಗಾಗಿತ್ತು. ಈ ಬಳಿಕ ಮೊದಲ ಬಾರಿ ಮರು ವಿನ್ಯಾಸ ಕಾರ್ಯ ನಡೆಸಲಾಗುತ್ತಿದೆ.
ಬಾಲಕಿಯರಿಗೆ ಇನೋವೇಶನ್ ಸೆಂಟರ್ ಆಗ್ತಿದೆ 150 ವರ್ಷ ಹಳೆಯ ಕಟ್ಟಡ - Gujarat heritage building
ಎಲ್ಎಕ್ಸ್ಎಸ್ ಫೌಂಡೇಶನ್, ಗುಜರಾತ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ ಸಹಭಾಗಿತ್ವದಲ್ಲಿ ಅಹಮದಾಬಾದ್ನ ಖಾಮಾಸಾದಲ್ಲಿರುವ 150 ವರ್ಷಗಳಷ್ಟು ಹಳೆಯದಾದ ಪಾರಂಪರಿಕ ಕಟ್ಟಡವನ್ನು ಮರು ವಿನ್ಯಾಸಗೊಳಿಸಲು ನಿರ್ಧರಿಸಲಾಗಿದೆ.
ಎಲ್ಎಕ್ಸ್ಎಸ್ ಫೌಂಡೇಶನ್, ಗುಜರಾತ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ ಸಹಭಾಗಿತ್ವದಲ್ಲಿ ಈ ಕಟ್ಟಡವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಅಂದಾಜು 3.2 ಕೋಟಿ ರೂ. ವೆಚ್ಚವಾಗಲಿದೆ ಎನ್ನಲಾಗುತ್ತಿದೆ. ಇನ್ನು ಈ ಬಗ್ಗೆ ಫೌಂಡೇಶನ್‌ನ ಸಹ ಸಂಸ್ಥಾಪಕಿ ಸಂಸ್ಕೃತಿ ಪಾಂಚಾಲ್ ಮಾತನಾಡಿ, "ಈ ಹಿಂದೆ ಇದು ಬಾಲಕಿಯರ ಕಾಲೇಜಾಗಿತ್ತು. ಆದರೆ 2001ರಲ್ಲಿ ಸಂಭವಿಸಿದ ಭೂಕಂಪನದಿಂದ ಹಾನಿಗೊಳಗಾಯಿತು. ಈ ಬಳಿಕ ಯಾರೂ ಸಹ ಇದನ್ನು ಅಭಿವೃದ್ಧಿ ಮಾಡಲು ಮುಂದಾಗಲಿಲ್ಲ. ಸರ್ಕಾರವು ಸಹ ಕಾಲೇಜನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ಮುಂದಾಯಿತು" ಎಂದು ಹೇಳಿದರು.
"2018 ರಲ್ಲಿ ನಾವು ಕಟ್ಟಡವನ್ನು ಪುನಃಸ್ಥಾಪಿಸಲು ನಿರ್ಧರಿಸಿದ್ದೆವು. ಈ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಣ ಸಚಿವರನ್ನು ಸಹ ಸಂಪರ್ಕಿಸಿದ್ದೇವೆ. ಇನ್ನು ಮುಂದಿನ ಎರಡು ವರ್ಷಗಳಲ್ಲಿ ಈ ಕೇಂದ್ರವನ್ನು ಪೂರ್ಣಗೊಳಿಸಲಾಗುವುದು" ಎಂದು ಅವರು ಹೇಳಿದರು.