ಅಹಮದಾಬಾದ್(ಗುಜರಾತ್):ಇಲ್ಲಿನ ಮೊರ್ಬಿ ಸೇತುವೆ ಕುಸಿದು ಬಿದ್ದ ದುರಂತದಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸೇತುವೆಯ ಮೇಲೆ ಸಾಮರ್ಥ್ಯಕ್ಕಿಂತಲೂ ದುಪ್ಪಟ್ಟು ಜನರು ಇದ್ದಿದ್ದು, ಅದು ಕುಸಿದು ಬೀಳಲು ಕಾರಣ ಎಂದು ಹೇಳಲಾಗುತ್ತಿದೆ. ಸೇತುವೆ ಕುಸಿಯುವುದಕ್ಕಿಂತಲೂ ಮೊದಲು ಅಹಮದಾಬಾದ್ನ ಕುಟುಂಬವೊಂದು ಭದ್ರತಾ ಸಿಬ್ಬಂದಿಗೆ ಈ ಬಗ್ಗೆ ಎಚ್ಚರಿಕೆ ನೀಡಿತ್ತು.
ಸೇತುವೆ ಮೇಲೆ ಯುವಕರ ಕೀಟಲೆ:ಸೇತುವೆ ಕುಸಿದು ಬೀಳುವುದಕ್ಕೂ ಮೊದಲು ಅಹಮದಾಬಾದ್ನ ಕುಟುಂಬವೊಂದು ಇಲ್ಲಿಗೆ ಭೇಟಿ ನೀಡಿತ್ತು. ಸೇತುವೆಯ ಸ್ಥಿತಿಯ ಬಗ್ಗೆ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಸೇತುವೆಯ ಮೇಲೆ ನೂರಾರು ಜನರು ಏಕಕಾಲಕ್ಕೆ ನಿಂತಿದ್ದರು. ಕೆಲ ಯುವಕರು ಸೇತುವೆಯನ್ನು ಅಲುಗಾಡಿಸಲು ಆರಂಭಿಸಿದರು. ಇದರಿಂದ ಅಲ್ಲಿದ್ದ ಜನರು ಭಯಗೊಂಡು ಈ ರೀತಿ ಮಾಡದಂತೆ ಯುವಕರಿಗೆ ಹೇಳಿದರು. ಆದರೆ, ಇದನ್ನು ನಿರ್ಲಕ್ಷ್ಯಸಿದ ಯುವಕರು ಸೇತುವೆ ಅಲುಗಾಡಿಸುವುದನ್ನು ಮುಂದುವರಿಸಿದರು.
ಬಳಿಕ ಅಲ್ಲಿದ್ದ ಭದ್ರತಾ ಸಿಬ್ಬಂದಿಗೆ ಯುವಕರ ಚೇಷ್ಟೆಯ ಬಗ್ಗೆ ದೂರು ನೀಡಿ, ಅವರನ್ನು ತಡೆಯಲು ಸೂಚಿಸಲಾಯಿತು. ಭದ್ರತಾ ಸಿಬ್ಬಂದಿ ಕೂಡ ಯುವಕರಿಗೆ ಮೌಖಿಕ ಸೂಚನೆ ನೀಡಿದರು.