ನವದೆಹಲಿ:ಕೊವಿಡ್-19 ಸೋಂಕಿನಿಂದ ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಇವರಿಗೆ 71 ವರ್ಷ ವಯಸ್ಸಾಗಿತ್ತು.
ಕಾಂಗ್ರೆಸ್ ಆಧಾರಸ್ತಂಭದಂತಿದ್ದ ಅಹ್ಮದ್ ಪಟೇಲ್ ವಿಧಿವಶ - ಅಹ್ಮದ್ ಪಟೇಲ್ ಜೀವನ
ಕೋವಿಡ್ -19 ಸೋಂಕು ತಗುಲಿ ಗುರುಗ್ರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಇಂದು ಮುಂಜಾನೆ ಕೊನೆಯುಸಿರೆಳೆದರು. ಇವರಿಗೆ ಬಹು ಅಂಗಾಂಗ ವೈಫಲ್ಯ ಸಮಸ್ಯೆ ಕೂಡ ಇತ್ತು.
ಅಹ್ಮದ್ ಪಟೇಲ್ ವಿಧಿವಶ
ಅಹ್ಮದ್ ಪಟೇಲ್ ಜೀವನ ಮತ್ತು ಪ್ರಮುಖ ರಾಜಕೀಯ ಹಂತಗಳು:
- ಅಹ್ಮದ್ ಪಟೇಲ್ ಎಂದೂ ಕರೆಯಲ್ಪಡುವ ಅಹ್ಮದ್ ಭಾಯಿ ಮೊಹಮ್ಮದ್ ಭಾಯಿ ಪಟೇಲ್ ಅವರು ಆಗಸ್ಟ್ 21, 1949 ರಂದು ಬಾಂಬೆಯ (ಈಗಿನ ಗುಜರಾತ್‌ನ) ಭರೂಚ್ನಲ್ಲಿ ಮೊಹಮ್ಮದ್ ಇಶಾಕ್ ಜಿ ಪಟೇಲ್ ಮತ್ತು ಹವಾಬೆನ್ ಮೊಹಮ್ಮದ್ ಭಾಯಿ ದಂಪತಿಯ ಮಗನಾಗಿ ಜನಿಸಿದರು.
- ಅಹ್ಮದ್ ಪಟೇಲ್ ದಕ್ಷಿಣ ಗುಜರಾತ್‌ನ ವೀರ್ ನರ್ಮದ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದರು.
- 1976 ರಲ್ಲಿ, ಅಹ್ಮದ್ ಪಟೇಲ್ ಅವರು ಮೆಮೂನಾ ಅಹ್ಮದ್ ಪಟೇಲ್ ಅವರನ್ನು ವಿವಾಹವಾದರು. ಇವರಿಗೆ ಮುಮ್ತಾಜ್ ಪಟೇಲ್ ಎಂಬ ಮಗಳು ಮತ್ತು ಫೈಸಲ್ ಪಟೇಲ್ ಎಂಬ ಮಗನಿದ್ದಾನೆ.
- 1976 ರಲ್ಲಿ ಗುಜರಾತ್‌ನ ಭರೂಚ್ ಜಿಲ್ಲೆಯಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಪಟೇಲ್ ರಾಜಕೀಯ ರಂಗಕ್ಕೆ ಪ್ರವೇಶಿಸಿದರು.
- ಅವರು ಪಕ್ಷದ ರಾಜ್ಯ ಮತ್ತು ಕೇಂದ್ರದ ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಗಳಿಸಿದ್ದರು. ಅಹ್ಮದ್ ಪಟೇಲ್ ಅವರು 1985 ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ಸಂಸದೀಯ ಕಾರ್ಯದರ್ಶಿ ಹುದ್ದೆಯಲ್ಲಿದ್ದರು.
- ಸರ್ದಾರ್ ಸರೋವರ್ ಯೋಜನೆಯನ್ನು ಮೇಲ್ವಿಚಾರಣೆ ಮಾಡಲು ನರ್ಮದಾ ನಿರ್ವಹಣಾ ಪ್ರಾಧಿಕಾರ ಸ್ಥಾಪಿಸುವಲ್ಲಿ ಪಟೇಲ್ ಪಾತ್ರ ಬಹುಮುಖ್ಯವಾದುದು.
- 1988 ರಲ್ಲಿ ಪಟೇಲ್ ಅವರನ್ನು ಜವಾಹರ್ ಭವನ್ ಟ್ರಸ್ಟ್‌ನ ಕಾರ್ಯದರ್ಶಿಯಾಗಿ ನೇಮಿಸಲಾಯಿತು ಮತ್ತು ಆಗಿನ ಪ್ರಧಾನಿ ರಾಜೀವ್ ಗಾಂಧಿಯವರು ನವದೆಹಲಿಯ ರೈಸಿನಾ ರಸ್ತೆಯಲ್ಲಿ 10 ವರ್ಷದಿಂದ ಪೂರ್ಣಗೊಳ್ಳದೇ ಸ್ಥಗಿತಗೊಂಡಿದ್ದ ಜವಾಹರ್ ಭವನ ನಿರ್ಮಾಣದ ಮೇಲ್ವಿಚಾರಣೆಯನ್ನು ಪಟೇಲ್ಗೆ ವಹಿಸಿದ್ದರು. ಅಹ್ಮದ್ ಪಟೇಲ್ ಆ ಭವನವನ್ನು ಕೇವಲ ಒಂದು ವರ್ಷದಲ್ಲಿ ಯಶಸ್ವಿಯಾಗಿ ಕಾಮಗಾರಿ ಮುಗಿಸಿದರು. ಈ ಭವನ ಕಂಪ್ಯೂಟರ್, ಟೆಲಿಫೋನ್ ಮತ್ತು ಇಂಧನ ಉಳಿಸುವ ಹವಾನಿಯಂತ್ರಣ ವ್ಯವಸ್ಥೆ ಹೊಂದಿದ್ದ ಹೆಚ್ಚು ಕಾಲ ಉಳಿಯಬಲ್ಲ ಕಟ್ಟಡವಾಗಿದೆ. ಕಾಂಗ್ರೆಸ್ ಶಾಸಕರ ಹಣವನ್ನು ಬಳಸಿ ಈ ಕಟ್ಟಡ ನಿರ್ಮಾಣ ಮಾಡಿದರು.
- 2005 ರಲ್ಲಿ ಜಾರಿಗೆ ಬಂದ ರಾಜೀವ್ ಗಾಂಧಿ ಗ್ರಾಮೀಣ ವಿದ್ಯುತ್ತೀಕರಣ ಯೋಜನೆಯಡಿ ಸೇರ್ಪಡೆಗೊಂಡ ಮೊದಲ ಐದು ಜಿಲ್ಲೆಗಳಲ್ಲಿ ಒಂದಾಗಿದೆ ಅಹ್ಮದ್ ಪಟೇಲ್ ಗೆದ್ದು ಬಂದ ಕ್ಷೇತ್ರ ಭರೂಚ್ ಜಿಲ್ಲೆ ಕೂಡ ಸ್ಥಾನ ಪಡೆದಿತ್ತು.
- ಭರೂಚ್ ಮತ್ತು ಅಂಕಲೇಶ್ವರ ಅವಳಿ ನಗರಗಳ ನಡುವಿನ ವಾಹನದಟ್ಟಣೆ ಕಡಿಮೆಗೊಳಿಸಲು ಸರ್ದಾರ್ ಪಟೇಲ್ ಸೇತುವೆ ನಿರ್ಮಾಣ ಮಾಡಿದ್ದು, ಅವರು ನೀಡಿದ ಕೊಡುಗೆಗಳಲ್ಲಿ ಒಂದಾಗಿದೆ. ಇನ್ನು ಅದೇ ವರ್ಷ ಪಟೇಲ್ ನಾಲ್ಕನೇ ಅವಧಿಗೆ ರಾಜ್ಯಸಭೆಗೆ ಆಯ್ಕೆಯಾದರು.
- ಸೋನಿಯಾ ಗಾಂಧಿಯವರ ಮುಖ್ಯ ಸಲಹೆಗಾರರೆಂದು ಪರಿಗಣಿಸಲಾಗಿದ್ದರೂ, ಅಹ್ಮದ್ ಪಟೇಲ್ 14 ಮತ್ತು 15 ನೇ ಲೋಕಸಭೆ ಚುನಾವಣೆ ವೇಳೆ ಯುಪಿಎ ಸರ್ಕಾರದಿಂದ ಹೊರಗುಳಿಯಲು ನಿರ್ಧರಿಸಿದರು.
- ಗುಜರಾತ್‌ನಲ್ಲಿ ಎಹ್ಸಾನ್ ಜಾಫ್ರಿ ನಂತರ ಲೋಕಸಭಾ ಸಂಸದರಾಗಿ ಆಯ್ಕೆಯಾದ ಎರಡನೇ ಮುಸ್ಲಿಂ ಸಂಸದ ಅಹ್ಮದ್ ಪಟೇಲ್.
- 2004 ಮತ್ತು 2014 ರ ನಡುವಿನ ಯುಪಿಎ ಸರ್ಕಾರದ ಅವಧಿಯಲ್ಲಿ, ಸರ್ಕಾರ ಮತ್ತು ಪಕ್ಷದ ನಡುವಿನ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವ ನಿಪುಣ, ಸಂಯೋಜಕ ಮತ್ತು ಅನುವಾದಕರಲ್ಲಿ ಪಟೇಲ್ ಕೂಡ ಒಬ್ಬರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಸೋನಿಯಾ ಗಾಂಧಿಯ ರಾಜಕೀಯ ಕಾರ್ಯದರ್ಶಿಯಾಗಿದ್ದರು.
- 2017 ರಲ್ಲಿ ಅವರು ಮತ್ತೆ ರಾಜ್ಯಸಭೆಗೆ ಆಯ್ಕೆಯಾದರು. ಕರ್ನಾಟಕ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಭಿನ್ನಮತ ತಪ್ಪಿಸಲು ಗುಜರಾತ್ ಶಾಸಕರನ್ನು ಬೆಂಗಳೂರಿಗೆ ಕರೆದೊಯ್ದು ಅಹ್ಮದ್ ಪಟೇಲ್ ಅವರು ಚುನಾವಣೆಯಲ್ಲಿ ಗೆಲ್ಲಲು ಡಿಕೆಶಿ ಸಹಾಯ ಮಾಡಿದರು.
- ರಾಜಕೀಯದ ಹೊರತಾಗಿ ಅಹ್ಮದ್ ಪಟೇಲ್ ನೆಹರು - ಗಾಂಧಿ ಕುಟುಂಬಕ್ಕೆ ಆಪ್ತರಾಗಿದ್ದರು.
- ಅಹ್ಮದ್ ಪಟೇಲ್ ಪಬ್ಲಿಸಿಟಿ ಅಷ್ಟಾಗಿ ಇಷ್ಟಪಡುತ್ತಿರಲಿಲ್ಲ. ಸಾಮಾನ್ಯವಾಗಿ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡೇ ಪಟೇಲ್ ತಮ್ಮ ಕಾರ್ಯನಿರ್ವಹಿಸುತ್ತಿದ್ದರು.