ಕರ್ನಾಟಕ

karnataka

ETV Bharat / bharat

ಸೋಮವಾರದಿಂದ ಸಂಸತ್​ ಅಧಿವೇಶನ.. ಸದನದಲ್ಲಿ ಈ ಪದಗಳ ಬಳಕೆಗೆ ನಿಷೇಧ.. ಪ್ರತಿಪಕ್ಷಗಳ ಆಕ್ರೋಶ - ಸಂಸತ್​​ನ ಮಳೆಗಾಲದ ಅಧಿವೇಶನ ಭಾರಿ ಕುತೂಹಲ ಕೆರಳಿಸಿದೆ

ಸಂಸತ್​ ಸದಸ್ಯರು ಯಾವುದೇ ಪ್ರದರ್ಶನ, ಧರಣಿ ಮುಷ್ಕರ, ಉಪವಾಸ ಅಥವಾ ಯಾವುದೇ ಧಾರ್ಮಿಕ ಸಮಾರಂಭವನ್ನು ನಡೆಸುವ ಉದ್ದೇಶಕ್ಕಾಗಿ ಸದನದ ಆವರಣವನ್ನು ಬಳಸುವಂತಿಲ್ಲ ಎಂದು ಸಂಸದರಿಗೆ ಲೋಕಸಭೆ ಸೆಕ್ರೆಟಿಯಟ್​​ ಸಲಹೆ ನೀಡಿದೆ.

Ahead of the Monsoon session of the Parliament
ಸೋಮವಾರದಿಂದ ಸಂಸತ್​ ಅಧಿವೇಶನ

By

Published : Jul 16, 2022, 11:39 AM IST

ನವದೆಹಲಿ:ಈ ಬಾರಿ ಸಂಸತ್​​ನ ಮಳೆಗಾಲದ ಅಧಿವೇಶನ ಭಾರಿ ಕುತೂಹಲ ಕೆರಳಿಸಿದೆ. ಏಕೆಂದರೆ, ಸದನದಲ್ಲಿ ಯಾವುದೇ ಕರಪತ್ರಗಳು, ಫಲಕಗಳನ್ನು ಹಿಡಿದು ಪ್ರತಿಭಟನೆ ಮಾಡದಂತೆ ಎಲ್ಲ ಸದಸ್ಯರಿಗೆ ಸೂಚನೆ ಹಾಗೂ ಸಲಹೆ ನೀಡಲಾಗಿದೆ.

ಯಾವುದೇ ನಿಂದನಾರ್ಹ ಮಾತು, ಪ್ರಶ್ನಾವಳಿ, ಕರಪತ್ರಗಳು, ಪತ್ರಿಕಾ ಟಿಪ್ಪಣಿಗಳು, ಮುದ್ರಿತ ಅಥವಾ ಯಾವುದೇ ವಿಷಯವನ್ನು ಮಾನ್ಯ ಸ್ಪೀಕರ್ ಅವರ ಪೂರ್ವಾನುಮತಿಯಿಲ್ಲದೇ ಸದನದಲ್ಲಿ ಬಳಸುವಂತಿಲ್ಲ ಹಾಗೂ ಸಂಸತ್ ಭವನದ ಸಂಕೀರ್ಣದ ಒಳಗೆ ಫಲಕಗಳನ್ನು ಪ್ರದರ್ಶಿಸದಂತೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ ಎಂದು ಲೋಕಸಭೆ ಸೆಕ್ರೆಟರಿಯೇಟ್ ತನ್ನ ಆದೇಶದಲ್ಲಿ ತಿಳಿಸಿದೆ.

ಸಂಸತ್​ ಸದಸ್ಯರು ಯಾವುದೇ ಪ್ರದರ್ಶನ, ಧರಣಿ ಮುಷ್ಕರ, ಉಪವಾಸ ಅಥವಾ ಯಾವುದೇ ಧಾರ್ಮಿಕ ಸಮಾರಂಭವನ್ನು ನಡೆಸುವ ಉದ್ದೇಶಕ್ಕಾಗಿ ಸದನದ ಆವರಣವನ್ನು ಬಳಸುವಂತಿಲ್ಲ ಎಂದು ಸಂಸದರಿಗೆ ಲೋಕಸಭೆ ಸೆಕ್ರೆಟಿಯಟ್​​ ತನ್ನ ಸುತ್ತೋಲೆಯಲ್ಲಿ ಸಲಹೆ ನೀಡಿದೆ.

ಈ ಹಿಂದೆ ಸದನದಲ್ಲಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದ್ದರಿಂದ ಅಲ್ಲಿನ ವಸ್ತುಗಳಿಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಲೋಕಸಭೆ ಸೆಕ್ರೆಟಿಯೇಟ್​ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಇತ್ತೀಚೆಗಿನ ಕೆಲವು ಅಧಿವೇಶನಗಳಲ್ಲಿ ಸಂಸತ್​ ಸದಸ್ಯರು ಕಲಾಪಗಳ ಉದ್ದಕ್ಕೂ ಫಲಕಗಳನ್ನು ಹಿಡಿದುಕೊಂಡು, ಕರಪತ್ರಗಳನ್ನು ಹರಿದು ಕುರ್ಚಿಯ ಮೇಲೆ ಎಸೆದು ಗಲಾಟೆ ಎಬ್ಬಿಸಿರುವ ಸನ್ನಿವೇಶಗಳು ಕಂಡು ಬಂದಿದ್ದವು. ಹೀಗಾಗಿ ಈ ನಿಷೇಧ ಎನ್ನಲಾಗಿದೆ.

ಪ್ರತಿಪಕ್ಷಗಳು ಕೆಂಡಾಮಂಡಲ:ಲೋಕಸಭೆಯ ಸಚಿವಾಲಯ ಕೈಗೊಂಡಿರುವ ಈ ನಿರ್ಧಾರ ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ರಾಜ್ಯಸಭಾ ಸಂಸದ ಜೈರಾಮ್ ರಮೇಶ್ ಸೇರಿದಂತೆ ಹಲವರು, ಟ್ವೀಟ್​ ಮಾಡಿ ಸರ್ಕಾರದ ಕ್ರಮವನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ.

ಬಿಜೆಪಿ ತಿರುಗೇಟು:ಇಂತಹ ಸುತ್ತೋಲೆಗಳು ಇದೇ ಮೊದಲ ಬಾರಿಗೆ ಏನು ಹೊರಡಿಸಲಾಗಿಲ್ಲ. ಈ ಬಗ್ಗೆ ಎಲ್ಲರಿಗೂ ಮನವರಿಕೆ ಮಾಡಲು ಸಂಸತ್​​ನ ಅಧಿಕಾರಿಗಳು ಈ ಹಿಂದೆ ಹೊರಡಿಸಲಾದ ಸುತ್ತೋಲೆಗಳನ್ನ ಸಾರ್ವಜನಿಕವಾಗಿ ಬಿಡುಗಡೆ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿರುವ ಬಿಜೆಪಿ ಐಟಿ ಸೆಲ್​ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವಿಟರ್‌ನಲ್ಲಿ 2013 ಮತ್ತು 2014 ರ ಆಗಿನ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹಂಚಿಕೊಂಡಿದ್ದಾರೆ. 2013 ಮತ್ತು 2014 ರಲ್ಲಿ ಯಾರು ಅಧಿಕಾರದಲ್ಲಿದ್ದರು? ಸಂಸತ್ತಿನಲ್ಲಿ ಧರಣಿ ನಡೆಸುವಂತಿಲ್ಲ ಎಂದು ಸುತ್ತೋಲೆ ಹೊರಡಿಸಿದವರು ಯಾರು? ಎಂದು ಪ್ರಶ್ನಿಸಿದ್ದಾರೆ.

ಈ ಪದಗಳನ್ನು ಇನ್ಮುಂದೆ ಸದನದಲ್ಲಿ ಬಳಸುವಂತಿಲ್ಲ: ಜುಲೈ 18 ಅಂದರೆ ಸೋಮವಾರದಿಂದ ಪ್ರಾರಂಭವಾಗುವ ಮುಂಗಾರು ಅಧಿವೇಶನಕ್ಕೂ ಮೊದಲು, ಸಂಸತ್ತಿನ ಉಭಯ ಸದನಗಳಲ್ಲಿ ಅಸಂಸದೀಯವೆಂದು ಪರಿಗಣಿಸಲಾಗುವ ಪದಗಳು ಮತ್ತು ಅಭಿವ್ಯಕ್ತಿಗಳ ಪಟ್ಟಿ ಹೊಂದಿರುವ ಕಿರುಪುಸ್ತಕವನ್ನು ಲೋಕಸಭೆಯ ಸೆಕ್ರೆಟರಿಯೇಟ್ ಬಿಡುಗಡೆ ಮಾಡಿದೆ, 'ಭ್ರಷ್ಟಾಚಾರ', 'ಭ್ರಷ್ಟ', 'ಜುಮ್ಲಾಜೀವಿ', 'ತನಾಶಾ', 'ಸರ್ವಾಧಿಕಾರಿ', 'ಕಪ್ಪು' ಮತ್ತು 'ಖಲಿಸ್ತಾನಿ' ಸೇರಿ ಇತರ ಪದಗಳನ್ನು ಬಳಸುವಂತಿಲ್ಲ ಎಂದು ಆ ಹೊತ್ತಿಗೆಯಲ್ಲಿ ಹೇಳಿದೆ.

ಇದನ್ನು ಓದಿ:ಕಾಶ್ಮೀರದ 47 ವಿಧಾನಸಭಾ ಕ್ಷೇತ್ರಗಳಲ್ಲಿ 5,403 ಮತಗಟ್ಟೆ ಸ್ಥಾಪಿಸಲು ಪ್ರಸ್ತಾಪ

ABOUT THE AUTHOR

...view details