ಗ್ವಾಲಿಯರ್(ಮಧ್ಯಪ್ರದೇಶ): ಕೃಷಿ ಸುಧಾರಣಾ ಕಾಯ್ದೆ ಹಿಂಪಡೆಯುವುದನ್ನು ಹೊರತುಪಡಿಸಿ, ಪ್ರತಿಭಟನಾನಿರತ ರೈತರು ಪರ್ಯಾಯ ಕ್ರಮಗಳ ಕುರಿತು ಚಿಂತನೆ ನಡೆಸಬೇಕಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
41 ಕೃಷಿ ಸಂಘಗಳೊಂದಿಗೆ ಮತ್ತು ಸರ್ಕಾರದ ನಡುವಿನ 10ನೇ ಸುತ್ತಿನ ಮಾತುಕತೆಯಲ್ಲಿ, ಕೃಷಿ ಸುಧಾರಣೆಯ ಕುರಿತು ಸಮಗ್ರ ಚರ್ಚೆ ನಡೆಸುವಂತೆ ಹಾಗೂ ಪರ್ಯಾಯ ಮಾರ್ಗಗಳನ್ನು ಪ್ರಸ್ತುತಪಡಿಸುವಂತೆ ಪ್ರತಿಭಟನಾನಿರತ ರೈತರಿಗೆ ಸಚಿವರು ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ತೋಮರ್ "ರೈತ ಸಂಘಗಳು ಪರ್ಯಾಯ ಮಾರ್ಗಗಳನ್ನು (ಕಾನೂನುಗಳನ್ನು ರದ್ದುಪಡಿಸುವುದನ್ನು ಹೊರತುಪಡಿಸಿ) ಚರ್ಚಿಸಲಿದ್ದು, ಇದರಿಂದ ನಾವು ಪರಿಹಾರವನ್ನು ಕಂಡುಹಿಡಿಯಬಹುದು. ನಾವು ಇಲ್ಲಿಯವರೆಗೆ ಒಂಬತ್ತು ಸುತ್ತಿನ ಮಾತುಕತೆ ನಡೆಸಿದ್ದೇವೆ. ರೈತ ಸಂಘಗಳು ಕಾನೂನುಗಳ ನಿಬಂಧನೆಗಳ ಬಗ್ಗೆ ಚರ್ಚಿಸಬೇಕು ಎಂದು ಹೇಳಿದ್ದೇನೆ. ಸರ್ಕಾರವು ಚರ್ಚಿಸುತ್ತಿದೆ ಮತ್ತು ಕಾನೂನುಗಳ ನಿಬಂಧನೆಗಳಲ್ಲಿ ಯಾವುದೇ ಸಮಸ್ಯೆಯನ್ನು ಅವರು ಗಮನಿಸಿದರೆ ಮುಕ್ತವಾಗಿ ಚರ್ಚಿಸಲು ಸರ್ಕಾರ ಸದಾ ಸಿದ್ಧ " ಎಂದರು.