ಕರ್ನಾಟಕ

karnataka

ETV Bharat / bharat

ಮಾ.12 ರಂದು ಕ್ವಾಡ್ ಶೃಂಗಸಭೆ: ಚೀನಾದ ಅಪಾಯಕಾರಿ ನಡೆ ಬಗ್ಗೆ ಎಚ್ಚರಿಸಿದ ಜಪಾನ್ - ಜಪಾನ್-ಭಾರತ ದ್ವಿಪಕ್ಷೀಯ ಸಹಕಾರ

ಜಪಾನ್ ಪ್ರಧಾನಿ ಸುಗಾ ಯೋಶಿಹೈಡ್ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸುಮಾರು 40 ನಿಮಿಷಗಳ ಕಾಲ ದೂರವಾಣಿ ಕರೆಯಲ್ಲಿ ಮಾತನಾಡಿದ್ದು, 'ಸ್ವತಂತ್ರ ಮತ್ತು ಮುಕ್ತ ಇಂಡೋ-ಪೆಸಿಫಿಕ್'ನ ಮಹತ್ವವನ್ನು ಮುಖ್ಯವಾಗಿ ಪ್ರಸ್ತಾಪಿಸಿದ್ದಾರೆ.

Quad summit
Quad summit

By

Published : Mar 10, 2021, 6:01 PM IST

ನವದೆಹಲಿ: ಆಸ್ಟ್ರೇಲಿಯಾ, ಭಾರತ, ಜಪಾನ್ ಹಾಗೂ ಅಮೆರಿಕದ ನಾಯಕರನ್ನು ಒಳಗೊಂಡ ಪ್ರಥಮ ಕ್ವಾಡ್​ (ಕ್ವಾಡ್ರಿಲ್ಯಾಟರಲ್​ ಏಷ್ಯನ್​ ಆರ್ಚ್​ ಆಫ್​ ಡೆಮಾಕ್ರಸಿ) ಶೃಂಗಸಭೆ ಮಾರ್ಚ್ 12ರಂದು ನಡೆಯಲಿದೆ.

ಮೊದಲ ಕ್ವಾಡ್ ಶೃಂಗಸಭೆಯ ಮುನ್ನ ಜಪಾನ್ ಪ್ರಧಾನಿ ಹಾಗೂ ಭಾರತ ಪ್ರಧಾನಿ ದೂರವಾಣಿ ಸಂಭಾಷಣೆ ನಡೆಸಿದ್ದು, ಪೂರ್ವ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಯಥಾಸ್ಥಿತಿ ಬದಲಿಸುವ ಚೀನಾದ ಏಕಪಕ್ಷೀಯ ಪ್ರಯತ್ನಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹಾಂಗ್ ಕಾಂಗ್ ಮತ್ತು ಕ್ಸಿನ್‌ಜಿಯಾಂಗ್‌ನ ಪರಿಸ್ಥಿತಿ ಹಾಗೂ ಚೀನಾದ ಹೊಸ ಕರಾವಳಿ ರಕ್ಷಣಾ ಕಾನೂನಿನ ಬಗ್ಗೆಯೂ ಚರ್ಚಿಸಿದ್ದಾರೆ.

40 ನಿಮಿಷಗಳ ಸಂಭಾಷಣೆಯಲ್ಲಿ ಈ ಪ್ರದೇಶದ ಭದ್ರತಾ ಪರಿಸ್ಥಿತಿಯನ್ನು ಚರ್ಚಿಸಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿದ್ದು, ಭಾರತೀಯ ಸಂಭಾಷಣೆಯ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ, ಎರಡು ದಿನಗಳ ಹಿಂದೆ ಸುದೀರ್ಘವಾದ ಪತ್ರಿಕಾಗೋಷ್ಠಿಯಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಬೀಜಿಂಗ್‌ನ ಆಂತರಿಕ ವಿಷಯಗಳನ್ನು ಪ್ರಸ್ತಾಪಿಸಿದ್ದರು. ಇವುಗಳ ಬಗ್ಗೆ ಜಪಾನ್​ ಉಲ್ಲೇಖಿಸಿದೆ.

ಜಪಾನ್ ಪ್ರಧಾನಿ ಸುಗಾ ಯೋಶಿಹೈಡ್ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸುಮಾರು 40 ನಿಮಿಷಗಳ ಕಾಲ ದೂರವಾಣಿ ಕರೆಯಲ್ಲಿ ಮಾತನಾಡಿದ್ದು, 'ಸ್ವತಂತ್ರ ಮತ್ತು ಮುಕ್ತ ಇಂಡೋ-ಪೆಸಿಫಿಕ್'ನ ಮಹತ್ವವನ್ನು ಮುಖ್ಯವಾಗಿ ಪ್ರಸ್ತಾಪಿಸಿದ್ದಾರೆ.

ಉಭಯ ನಾಯಕರು ಮಲಾಕ್ಕಾ ಜಲಸಂಧಿಗಳ ಎರಡೂ ಬದಿಯಲ್ಲಿ ಇರುವ ಭೌಗೋಳಿಕ ಪ್ರದೇಶ ಇಂಡೋ-ಪೆಸಿಫಿಕ್​ನಲ್ಲಿ ಯಥಾಸ್ಥಿತಿಗೆ ಚೀನಾ ಒಡ್ಡಿದ ಬೆದರಿಕೆಯ ಬಗ್ಗೆಯೂ ಮಾತನಾಡಿದರು. ಮಲಾಕ್ಕಾ ಜಲಸಂಧಿಗಳು ಭಾರತೀಯ ಮತ್ತು ಪೆಸಿಫಿಕ್ ಸಾಗರಗಳನ್ನು ಸಂಪರ್ಕಿಸುತ್ತವೆ. ಪೂರ್ವ-ಪಶ್ಚಿಮ ಅಂತಾರಾಷ್ಟ್ರೀಯ ವ್ಯಾಪಾರದ ಪ್ರಮುಖ ಚಾಕ್ ಪಾಯಿಂಟ್ ಆಗಿದೆ.

ವರ್ಚುವಲ್​ ಮೂಲಕ ನಡೆಯುವ ಪ್ರಥಮ ಕ್ವಾಡ್​ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್, ಜಪಾನ್ ಪ್ರಧಾನಿ ಯೋಶಿಹೈಡ್ ಸುಗಾ ಮತ್ತು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮಂಗಳವಾರ ರಾತ್ರಿ ಔಪಚಾರಿಕವಾಗಿ ತಿಳಿಸಿತ್ತು.

ಇದನ್ನೂ ಓದಿ: 254 ಅಂಕ ಜಿಗಿದ ಸೆನ್ಸೆಕ್ಸ್​: ಆಟೋ ಷೇರುಗಳ ಖರೀದಿ ಭರಾಟೆ

ಆಸಕ್ತಿದಾಯಕ ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳನ್ನು ಚರ್ಚಿಸುವುದರ ಜೊತೆಗೆ, 'ಸ್ವತಂತ್ರ ಮತ್ತು ಮುಕ್ತ ಇಂಡೋ-ಪೆಸಿಫಿಕ್' ಸಹಕಾರದ ಪ್ರಾಯೋಗಿಕ ಕ್ಷೇತ್ರಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ. ಭದ್ರತಾ ಸಮಸ್ಯೆಗಳನ್ನು ಮೀರಿ, ಹೊಸ ಪೂರೈಕೆ ಸರಪಳಿಗಳ ಬಗ್ಗೆ ಚರ್ಚಿಸಲಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಚೀನಾದ ಮೇಲಿನ ಅತಿಯಾದ ಅವಲಂಬನೆಯ ಅಪಾಯಗಳನ್ನು ಜಗತ್ತು ಅರಿತುಕೊಂಡಿದೆ. ಹೀಗಾಗಿ, ಅದರ ಮೇಲಿನ ಅವಲಂಬನೆ ತಗ್ಗಿಸಲು ಈ ಸಭೆಯೂ ಅತ್ಯಂತ ಮಹತ್ವದಾಗಿದೆ.

ಕ್ವಾಡ್ ಶೃಂಗಸಭೆಯು 'ಸ್ಥಿರ ಪೂರೈಕೆ ಸರಪಳಿಗಳು, ಉದಯೋನ್ಮುಖ ಮತ್ತು ನಿರ್ಣಾಯಕ ತಂತ್ರಜ್ಞಾನ, ಕಡಲ ಸುರಕ್ಷತೆ ಮತ್ತು ಹವಾಮಾನ ಬದಲಾವಣೆಯಂತಹ ಸಮಕಾಲೀನ ಸವಾಲುಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವ ಅವಕಾಶದ ವೇದಿಕೆಯಾಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ABOUT THE AUTHOR

...view details