ನವದೆಹಲಿ:ಭಾರತಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭೇಟಿ ನೀಡುವ ಮುನ್ನವೇ ಅಲ್ಲಿನ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ಆಗಮಿಸುತ್ತಿದ್ದಾರೆ. ಡಿಸೆಂಬರ್ 6 ರಂದು ನಡೆಯುವ 2+2 ಸಂವಾದಲ್ಲಿ ಪಾಲ್ಗೊಳ್ಳಲು ಸೆರ್ಗೆ ಲಾವ್ರೊವ್ ನಾಳೆ ದೆಹಲಿಗೆ ಬಂದಿಳಿಯಲಿದ್ದಾರೆ.
ಡಿಸೆಂಬರ್ 6 ರಂದೇ ರಷ್ಯಾ ಹಾಗೂ ಭಾರತದ ನಡುವೆ 21ನೇ ವಾರ್ಷಿಕ ಶೃಂಗಸಭೆ ನಡೆಯಲಿದ್ದು, ಅಧ್ಯಕ್ಷ ಪುಟಿನ್, ಸೋಮವಾರ ಭಾರತಕ್ಕೆ ಬರಲಿದ್ದಾರೆ. 2+2 ಸಂವಾದಲ್ಲಿ ಸೆರ್ಗೆಯ್ ಲಾವ್ರೊವ್ ಮತ್ತು ರಕ್ಷಣಾ ಸಚಿವ ಸೆರ್ಗೆ ಶೋಯಿಗು ಅವರು ರಷ್ಯಾವನ್ನು ಪ್ರತಿನಿಧಿಸಲಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಭಾರತವನ್ನು ಪ್ರತಿನಿಧಿಸಲಿದ್ದಾರೆ.