ನವದೆಹಲಿ: ಬಿಹಾರ ವಿಧಾನಸಭೆ ಹಾಗೂ ವಿವಿಧ ರಾಜ್ಯಗಳಲ್ಲಿನ ಬೈ ಎಲೆಕ್ಷನ್ ಮುಕ್ತಾಯಗೊಂಡಿದ್ದು, ನವೆಂಬರ್ 10ರಂದು ಫಲಿತಾಂಶ ಬಹಿರಂಗಗೊಳ್ಳಲಿದೆ. ಹೀಗಾಗಿ ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮಹತ್ವದ ಸಭೆ ನಡೆಸಲಿದ್ದಾರೆ.
ಬಿಹಾರ, ಬೈ ಎಲೆಕ್ಷನ್ ಚುನಾವಣೆ ಫಲಿತಾಂಶ: ನಾಳೆ ಮಹತ್ವದ ಸಭೆ ಕರೆದ ಜೆ.ಪಿ.ನಡ್ಡಾ - ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮಹತ್ವದ ಸಭೆ
ರಾಷ್ಟ್ರ ರಾಜಕಾರಣದಲ್ಲಿ ಮಹತ್ವ ಪಡೆದುಕೊಂಡಿರುವ ಬಿಹಾರ ಚುನಾವಣೆ ಫಲಿತಾಂಶ ನವೆಂಬರ್ 10ರಂದು ಬಹಿರಂಗಗೊಳ್ಳಲಿದ್ದು, ಅದಕ್ಕೂ ಮುಂಚಿತವಾಗಿ ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಮಹತ್ವದ ಸಭೆ ಕರೆದಿದ್ದಾರೆ.
![ಬಿಹಾರ, ಬೈ ಎಲೆಕ್ಷನ್ ಚುನಾವಣೆ ಫಲಿತಾಂಶ: ನಾಳೆ ಮಹತ್ವದ ಸಭೆ ಕರೆದ ಜೆ.ಪಿ.ನಡ್ಡಾ JP Nadda](https://etvbharatimages.akamaized.net/etvbharat/prod-images/768-512-9469923-400-9469923-1604759707082.jpg)
ಬಿಜೆಪಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕರೆ ನೀಡಿದ್ದು, ಲಭ್ಯವಾಗಿರುವ ಮಾಹಿತಿ ಪ್ರಕಾರ ಮತದಾನದ ಫಲಿತಾಂಶ ಬಹಿರಂಗಗೊಂಡ ಬಳಿಕ ಪಕ್ಷ ಯಾವ ರೀತಿಯಲ್ಲಿ ವರ್ತಿಸಬೇಕು. ಪ್ರತಿಕ್ರಿಯೆ ಯಾವ ರೀತಿಯಾಗಿರಬೇಕು ಎಂಬ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ಇದರ ಜತೆಗೆ ಹೊಸದಾಗಿ ಆಯ್ಕೆಯಾಗಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳ ಕೆಲಸ ಹಾಗೂ ಜವಾಬ್ದಾರಿಗಳ ಕುರಿತು ನಡ್ಡಾ ಮಾಹಿತಿ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಡ್ಡಾ ಹೊಸ ಪದಾಧಿಕಾರಿಗಳ ತಂಡ ಘೋಷಣೆ ಮಾಡಿದ್ದಾರೆ. ಹಿರಿಯ ಮುಖಂಡರಾದ ರಾಮ್ ಮಾಧವ್, ಪಿ.ಮುರಳೀಧರ್ ರಾವ್, ಸರೋಜ್ ಪಾಂಡೆ ಮತ್ತು ಅನಿಲ್ ಜೈನ್ ಸೇರಿದಂತೆ ಅನೇಕರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕಗೊಂಡಿದ್ದಾರೆ.