ಪುಣೆ:ಭಾರತದ ಅತಿದೊಡ್ಡ ಬ್ಯಾಂಕ್ ವಂಚನೆಯಾದ ಡಿಎಚ್‌ಎಫ್‌ಎಲ್ ಹಗರಣದ ಪ್ರಮುಖ ಆರೋಪಿಯಾದ ಪುಣೆಯ ಬಿಲ್ಡರ್ ಅವಿನಾಶ್ ಭೋಸಲೆ ಅವರ ಮನೆಯಿಂದ ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಅನ್ನು ಸಿಬಿಐ ವಶಪಡಿಸಿಕೊಂಡಿದೆ. ಹಗರಣಕ್ಕೆ ಸಂಬಂಧಿಸಿದಂತೆ ಆದಾಯದಿಂದ ಬರುವ ಆಸ್ತಿಯನ್ನು ಪತ್ತೆ ಹಚ್ಚಲು ತನಿಖಾ ಸಂಸ್ಥೆ ಕಳೆದ ಕೆಲವು ದಿನಗಳಿಂದ ವಿವಿಧ ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ. ಈ ಸಂದರ್ಭದಲ್ಲಿ ಪುಣೆ ಮನೆಯಲ್ಲಿ ಹೆಲಿಕಾಪ್ಟರ್ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಸಿಬಿಐ ಜೂನ್ 20 ರಂದು ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ನ ಮಾಜಿ ಸಿಎಂಡಿ ಕಪಿಲ್ ವಾಧವನ್, ನಿರ್ದೇಶಕ ದೀಪಕ್ ವಾಧವನ್ ಮತ್ತು ಇತರರನ್ನು 34,615 ಕೋಟಿ ರೂಪಾಯಿ ಮೌಲ್ಯದ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಿದೆ. ಇದು ದೇಶದ ಅತಿದೊಡ್ಡ ವಂಚನೆ ಪ್ರಕರಣ ಎಂದೇ ಹೇಳಲಾಗಿದೆ.